alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬರಲಿದೆ 25 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ನೋಕಿಯಾ ಫೋನ್

ಎರಡು ವರ್ಷಗಳ ಹಿಂದೆ ಹೆಚ್ ಎಂ ಡಿ ಗ್ಲೋಬಲ್ ನೋಕಿಯಾ 3310 ಜನಪ್ರಿಯ ಫೋನನ್ನು ಮತ್ತೆ ಮಾರುಕಟ್ಟೆಗೆ ಬಿಟ್ಟಿತ್ತು. ಈಗ ನೋಕಿಯಾದ ಇನ್ನೊಂದು ಫೋನನ್ನು ಮತ್ತೆ ಮಾರುಕಟ್ಟೆಗೆ ತರಲು ಮುಂದಾಗಿದೆ. 1994ರಲ್ಲಿ 25 ವರ್ಷಗಳ ಹಿಂದೆ ನೋಕಿಯಾ 2010 ಕ್ಲಾಸಿಕ್ ಫೀಚರ್ ಫೋನ್ ಬಿಡುಗಡೆ ಮಾಡಿತ್ತು. ಈಗ ಈ ಫೋನ್ ಮತ್ತೆ ಮಾರುಕಟ್ಟೆಗೆ ಬರಲಿದೆ.

ನೋಕಿಯಾ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೋಕಿಯಾ 2010 ಕ್ಲಾಸಿಕ್ ಫೀಚರ್ ಫೋನನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡ್ತಿದೆ. ಮುಂದಿನ ವರ್ಷ ನೋಕಿಯಾ ಮೊದಲ ಮೊಬೈಲ್ ಬಿಡುಗಡೆ ಮಾಡಿ 25 ವರ್ಷ ಕಳೆಯಲಿದೆ. ಈ ಸಂದರ್ಭದಲ್ಲಿ ಹಳೆ ಮೊಬೈಲನ್ನು ನೋಕಿಯಾ ಹೊಸ ರೂಪದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ.

ಹೊಸ ವಿನ್ಯಾಸದ ಜೊತೆ ಬಣ್ಣದ ಸ್ಕ್ರೀನ್ ನೊಂದಿಗೆ ಫೋನ್ 4ಜಿ ಸಂಪರ್ಕವನ್ನು ಹೊಂದಿರಲಿದೆ. ನೋಕಿಯಾ 2010ಗೆ ಫೇಸ್ಬುಕ್ ಹಾಗೂ ವಾಟ್ಸ್ ಅಪ್ ಬೆಂಬಲ ಸಿಗಲಿದೆ ಎಂದು ಮೂಲಗಳು ಹೇಳಿವೆ. ನೋಕಿಯಾ 3310ದಂತೆ ಇದಕ್ಕೂ ಬಣ್ಣಗಳ ಆಯ್ಕೆ ನೀಡುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...