alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ನೋಕಿಯಾ 8

ಹೆಚ್ಎಂಡಿ ಗ್ಲೋಬಲ್ ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್ಫೊನ್ ನೋಕಿಯಾ 8ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಮೊದಲ ಬಾರಿ ಕಂಪನಿ ಇಂಗ್ಲೆಂಡ್ ನಲ್ಲಿ ಬಿಡುಗಡೆ ಮಾಡಿತ್ತು. ನೋಕಿಯಾ 8 ಬೆಲೆ 39,999 ರೂಪಾಯಿಯಾಗಿದ್ದು ಇದ್ರ ಮಾರಾಟ ಅಕ್ಟೋಬರ್ 14ರಿಂದ ಶುರುವಾಗಲಿದೆ.

ನೋಕಿಯಾ ಗ್ರಾಹಕರು ಅಮೆಜಾನ್ ಇಂಡಿಯಾ ವೆಬ್ಸೈಟ್ ಜೊತೆಗೆ ಚಿಲ್ಲರೆ ವ್ಯಾಪಾರಿಗಳಿಂದ ಮೊಬೈಲ್ ಖರೀದಿ ಮಾಡಬಹುದಾಗಿದೆ. ನೋಕಿಯಾ 8ನಲ್ಲಿ ಆದಷ್ಟು ಬೇಗ ಆಂಡ್ರಾಯ್ಡ್ ಓರಿಯೊ ನೀಡುವುದಾಗಿ ಬಿಡುಗಡೆ ಸಮಾರಂಭದಲ್ಲಿ ಕಂಪನಿ ಹೇಳಿದೆ.

ಪ್ರಪಂಚದಲ್ಲಿ ಇದೇ ಮೊದಲ ಬಾರಿ ಡ್ಯುಯಲ್ ಸೈಟ್ ವಿಡಿಯೋವನ್ನು ಈ ಮೊಬೈಲ್ ನಲ್ಲಿ ನೀಡಲಾಗಿದೆ ಎಂದು ಕಂಪನಿ ಹೇಳ್ತಿದೆ. ಫೇಸ್ಬುಕ್ ಹಾಗೂ ಯೂಟ್ಯೂಬ್ ಎರಡನ್ನೂ ಒಟ್ಟಿಗೆ ಬಳಸಬಹುದಾಗಿದೆ. ಇದ್ರ ಜೊತೆಗೆ ನೋಕಿಯಾ OZO ಆಡಿಯೋ ನೀಡಲಾಗಿದೆ. ಇದ್ರ ಮೂಲಕ 360 ಡಿಗ್ರಿ ಆಡಿಯೋ ಅನುಭವವನ್ನು ಗ್ರಾಹಕರು ಪಡೆಯಬಹುದಾಗಿದೆ.

ಇದ್ರಲ್ಲಿ ಅಲ್ಯೂಮಿನಿಯಂ ಬಾಡಿ ನೀಡಲಾಗಿದ್ದು, ಗ್ಲಾಸಿಗೆ ಮಿರರ್ ಫಿನಿಶ್ ನೀಡಲಾಗಿದೆ. ಇದ್ರಲ್ಲಿ 4ಜಿಬಿ ರ್ಯಾಮ್ ಜೊತೆ 6 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಕಾರ್ಡ್ ಸಹಾಯದಿಂದ ಇದನ್ನು 256 ಜಿಬಿವರೆಗೆ ಹಿಗ್ಗಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...