alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ನೋಕಿಯಾ ಸ್ಮಾರ್ಟ್ಫೋನ್

nokia_final_main_1497339229_749x421

ನೋಕಿಯಾ ಗ್ರಾಹಕರಿಗೊಂದು ಖುಷಿ ಸುದ್ದಿ. ನೋಕಿಯಾ ತಮ್ಮ ಮೂರು ಸ್ಮಾರ್ಟ್ಫೋನ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೋಕಿಯಾ-3, ನೋಕಿಯಾ 5 ಹಾಗೂ ನೋಕಿಯಾ-6 ಭಾರತೀಯ ಮಾರುಕಟ್ಟೆ ಪ್ರವೇಶ ಮಾಡಿವೆ. ಈ ಮೂರೂ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ನ ಇತ್ತೀಚಿನ ಆವೃತ್ತಿಯಲ್ಲಿ ಕೆಲಸ ಮಾಡಲಿದೆ.

ಭಾರತೀಯ ಮಾರುಕಟ್ಟೆಗೆ ಬಂದಿರುವ ನೋಕಿಯಾ ಸ್ಮಾರ್ಟ್ಫೋನ್ ಗಳ ಬೆಲೆ ಹೀಗಿದೆ. ನೋಕಿಯಾ-3 ಸ್ಮಾರ್ಟ್ಪೋನ್ ಬೆಲೆ 9,499 ರೂಪಾಯಿ. ನೋಕಿಯಾ -5 ಸ್ಮಾರ್ಟ್ಫೋನ್ ಬೆಲೆ 12,899 ರೂಪಾಯಿ. ಹಾಗೆ ನೋಕಿಯಾ-6 ಸ್ಮಾರ್ಟ್ಫೋನ್ ಬೆಲೆ 14,999 ರೂಪಾಯಿ.

ನೋಕಿಯಾ-6 ಸ್ಮಾರ್ಟ್ಫೋನ್ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಅಮೆಜಾನ್ ಇಂಡಿಯಾದಲ್ಲಿ ಮಾತ್ರ ಲಭ್ಯವಿದೆ. ಇದ್ರ ಮಾರಾಟ ಜುಲೈ 14ರಿಂದ ಶುರುವಾಗಲಿದೆ. ಅಮೆಜಾನ್ ಪ್ರಧಾನ ಬಳಕೆದಾರರಿಗೆ ನೋಕಿಯಾ-6 ಸ್ಮಾರ್ಟ್ಫೋನ್ ಖರೀದಿ ಮಾಡಿದಲ್ಲಿ ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.

ನೋಕಿಯಾ-5 ಹಾಗೂ ನೋಕಿಯಾ-3 ಸ್ಮಾರ್ಟ್ಫೋನ್ ಆಪ್ಲೈನ್ ಮಳಿಗೆಗಳಲ್ಲಿ ಸಿಗಲಿದೆ. ನೋಕಿಯಾ-3 ಸ್ಮಾರ್ಟ್ಫೋನ್ ಮಾರಾಟ ಜೂನ್ 16ರಿಂದ ಶುರುವಾಗಲಿದೆ. ನೋಕಿಯಾ-5 ಸ್ಮಾರ್ಟ್ಫೋನ್ ಫ್ರೀ ಬುಕ್ಕಿಂಗ್ ಜುಲೈ 7ರಿಂದ ಶುರುವಾಗಲಿದೆ. ಕಂಪನಿ, ಸ್ಮಾರ್ಟ್ಫೋನ್ ಮಾರಾಟಕ್ಕಾಗಿ ದೇಶದಾದ್ಯಂತ 400 ಎಕ್ಸ್ ಕ್ಲ್ಯೂಸಿವ್ ವಿತರಕರನ್ನು ನೇಮಿಸಿದೆ. ಜತೆಗೆ 80 ಸಾವಿರ ರಿಟೇಲ್ ಸ್ಟೋರ್ ಗಳಲ್ಲಿ ಫೋನ್ ಸಿಗಲಿದೆ.

ನೋಕಿಯಾ 3310 ಫೋನ್ ಭಾರತದಲ್ಲಿ ಸಿದ್ಧವಾಗ್ತಾ ಇದೆ. ಹಾಗೆ ಈ ಮೂರು ಸ್ಮಾರ್ಟ್ಫೋನ್ ಕೂಡ ಭಾರತದಲ್ಲಿ ರೆಡಿಯಾಗಲಿವೆ. ಅಂದ್ರೆ ನೋಕಿಯಾದ ಎಲ್ಲ ಫೋನ್ ಗಳು ಮೇಡ್ ಇನ್ ಇಂಡಿಯಾ ಆಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...