alex Certify
ಕನ್ನಡ ದುನಿಯಾ       Mobile App
       

Kannada Duniya

1,499 ರೂ.ಗೆ ಸಿಗ್ತಿದೆ ನೋಕಿಯಾದ ದುಬಾರಿ ಫೋನ್

ಹೆಚ್ ಎಂ ಡಿ ಗ್ಲೋಬಲ್, ಏರ್ಟೆಲ್ ಜೊತೆ ಸೇರಿ ಭರ್ಜರಿ ಆಫರ್ ಒಂದನ್ನು ಘೋಷಣೆ ಮಾಡಿದೆ. ಒಪ್ಪಂದದ ಅಡಿಯಲ್ಲಿ ನೋಕಿಯಾದ ಮೂರು ಸ್ಮಾರ್ಟ್ಫೋನ್ ಗಳನ್ನು ಹೆಚ್ ಎಂ ಡಿ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದೆ. ಗ್ರಾಹಕರು ಕೇವಲ 1,499 ರೂಪಾಯಿ ನೀಡಿ ಈ ಸ್ಮಾರ್ಟ್ಫೋನ್ ಮನೆಗೆ ಕೊಂಡೊಯ್ಯಬಹುದಾಗಿದೆ.

ನೋಕಿಯಾ 6.1 , 3ಜಿಬಿ ಹಾಗೂ 4ಜಿಬಿಯ 16,999 ರೂಪಾಯಿ ಬೆಲೆಯುಳ್ಳ ಈ ಫೋನನ್ನು ಗ್ರಾಹಕರು ಕೇವಲ 1,499 ರೂಪಾಯಿಗೆ ಇಎಂಐ ನಲ್ಲಿ ಖರೀದಿ ಮಾಡಬಹುದಾಗಿದೆ. ಆದ್ರೆ ಗ್ರಾಹಕರು ನೋಕಿಯಾ 6.1 3ಜಿಬಿ ಫೋನ್ ಗೆ 3,799 ರೂಪಾಯಿ  ಹಾಗೂ 6.1, 4ಜಿಬಿ ಫೋನ್ ಗೆ 5799 ರೂಪಾಯಿ ಡೌನ್ಪೇಮೆಂಟ್ ನೀಡಬೇಕಾಗುತ್ತದೆ.

ಇದ್ರ ಜೊತೆಗೆ ನೋಕಿಯಾ 7 ಪ್ಲಸ್ ಫೋನ್ ಕೂಡ ಈ ಪ್ಲಾನ್ ನಡಿಯಲ್ಲಿ ಸಿಗ್ತಿದೆ. ಇದಕ್ಕೆ 5,999 ರೂಪಾಯಿಯನ್ನು ನೀವು ನೀಡಬೇಕಾಗುತ್ತದೆ. ಇಎಂಐ ಆಫರ್ ಜೊತೆ ನೋಕಿಯಾ ಏರ್ಟೆಲ್ ನ ಪೋಸ್ಟ್ ಪೇಡ್ ಪ್ಲಾನನ್ನು ಗ್ರಾಹಕರಿಗೆ ನೀಡ್ತಿದೆ. 30 ಜಿಬಿ ಹೈ ಸ್ಪೀಡ್ ಡೇಟಾ ಗ್ರಾಹಕರಿಗೆ ಪ್ರತಿ ತಿಂಗಳು ಸಿಗಲಿದೆ.

ಒಂದು ತಿಂಗಳಿನಲ್ಲಿ 30 ಜಿಬಿ ಖರ್ಚಾಗದೆ ಉಳಿದ್ರೆ ಅದು ಮುಂದಿನ ತಿಂಗಳಿಗೆ ವರ್ಗಾವಣೆಯಾಗಲಿದೆ. ಇದ್ರ ಜೊತೆಗೆ ಅನಿಯಮಿತ ಕರೆ ಹಾಗೂ ಏರ್ಟೆಲ್ ಟಿವಿ ಸಬ್ಸ್ಕ್ರೈಬ್ ಸೌಲಭ್ಯವೂ ಸಿಗಲಿದೆ. ಏರ್ಟೆಲ್  ಸ್ಟೋರ್ ನಲ್ಲಿ ಈ ಎಲ್ಲ ಫೋನ್ ಗ್ರಾಹಕರಿಗೆ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...