alex Certify
ಕನ್ನಡ ದುನಿಯಾ       Mobile App
       

Kannada Duniya

ನೆಟ್ ಇಲ್ಲದೆ ಚಾಟ್ ಮಾಡುವ ಸೇವೆ ನೀಡ್ತಿದೆ ‘ಹೈಕ್’

ದೇಶೀಯ ಮೆಸ್ಸೇಜಿಂಗ್ ಅಪ್ಲಿಕೇಷನ್ ಹೈಕ್, ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಗ್ರಾಹಕರಿಗಾಗಿ ಹೊಸ ಸೇವೆಯೊಂದನ್ನು ಹೈಕ್ ಶುರುಮಾಡಿದೆ. ಈ ಸೇವೆಯಲ್ಲಿ ಆಂಡ್ರಾಯ್ಡ್ ಬಳಕೆದಾರರು ಇಂಟರ್ನೆಟ್ ಡೇಟಾ ಇಲ್ಲದೆ ಸಂದೇಶ ಕಳುಹಿಸಬಹುದು. ಸುದ್ದಿ ಓದಬಹುದು. ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಹಣ ವರ್ಗಾವಣೆ ಮಾಡುವ ಅವಕಾಶವನ್ನು ಕೂಡ ಹೈಕ್ ನೀಡ್ತಿದೆ,

ವಾಟ್ಸ್ ಅಪ್ ಗೆ ಟಕ್ಕರ್ ನೀಡಲು ಹೈಕ್ ಈ ಮಹತ್ವದ ಸೇವೆ ಶುರುಮಾಡಿದೆ. ಇನ್ನೂ ಇಂಟರ್ನೆಟ್ ಸೇವೆ ಹೊಂದಿರದ ಜನರನ್ನು ಟಾರ್ಗೆಟ್ ಮಾಡಿರುವ ಹೈಕ್ 10 ಕೋಟಿಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದುವ ಗುರಿಯಿಟ್ಟುಕೊಂಡಿದೆ. ಹೈಕ್ ಈ ಸೇವೆ ನೀಡಲು ಏರ್ಟೆಲ್, ವೋಡಾಫೋನ್ ಮತ್ತು ಬಿ ಎಸ್ ಎನ್ ಎಲ್ ನಂತ ಗ್ರಾಮೀಣ ಜನರನ್ನು ತಲುಪುತ್ತಿರುವ ದೂರಸಂಪರ್ಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇಂಟೆಕ್ಸ್ ಮತ್ತು ಕಾರ್ಬನ್ ಫೋನ್ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಇಂಟೆಕ್ಸ್ ಮತ್ತು ಕಾರ್ಬನ್ ಫೋನ್ ಖರೀದಿ ಮಾಡುವ, ಹೈಕ್ ವಾಲೆಟ್ ಗೆ ಸೈನ್ ಇನ್ ಆಗುವ ಗ್ರಾಹಕರಿಗೆ ಹೈಕ್ 200 ರೂಪಾಯಿ ಕ್ಯಾಶ್ಬ್ಯಾಕ್ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...