alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಗರೀಬ್ ರಥ್ ಪ್ರಯಾಣ ದರ ಏರಿಕೆ ಸಾಧ್ಯತೆ

ಗರೀಬ್ ರಥ್ ರೈಲಿನ ಟಿಕೆಟ್ ದರವನ್ನು ರೈಲ್ವೇ ಇಲಾಖೆ ಹೆಚ್ಚಿಸುವ ಸಾಧ್ಯತೆಗಳಿವೆ. ಅತಿ ಶೀಘ್ರದಲ್ಲೇ ಗರೀಬ್ರಥ್ನಲ್ಲಿ ಬೆಡ್ರೋಲ್ ಕಿಟ್ಸ್ಗಳ ಮೇಲೆ 25 ರೂಪಾಯಿ ದರವನ್ನು ಹೆಚ್ಚಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಗರೀಬ್ ರಥ್ ಎಕ್ಸ್ಪ್ರೆಸ್ನ ಬೆಲೆ ಏರಿಸದೆ ದಶಕ ಕಳೆದಿದೆ. ಕಳೆದ ಹತ್ತುವರ್ಷಗಳಿಂದಲೂ ಒಂದೇ ದರವನ್ನು ನಿಗದಿಪಡಿಸಲಾಗಿದೆ. ರೈಲ್ವೇ ಮಾರ್ಗಗಳ ಉನ್ನತೀಕರಣ ಬಳಿಕವು ಗರೀಬ್ ರಥ್ ಪ್ರಯಾಣದ ದರದಲ್ಲಿ ಏರಿಕೆಯಾಗಿಲ್ಲ. ಆದ್ರೆ ಈಗ ಮಾರ್ಗಗಳ ನಿರ್ವಹಣಾ ದೃಷ್ಟಿಯಿಂದ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಅಂತಿದ್ದಾರೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು.

ಪ್ರಸ್ತುತ ಬೆಡ್ರೋಲ್ ಕಿಟ್ಗಳನ್ನ ನೀಡುವ ವ್ಯವಸ್ಥೆ ಹವಾ ನಿಯಂತ್ರಿತ ಮುಂಗಡ ಬುಕ್ಕಿಂಗ್ ಸೇವೆಯಲ್ಲಿ ಮಾತ್ರ ಲಭ್ಯವಿತ್ತು. ಆದ್ರೆ ಈಗ ಆ ಸೇವೆಯನ್ನ ಗರೀಬ್ ರಥ್ ಎಕ್ಸ್ಪ್ರೆಸ್ಗೆ ನೀಡೋದಕ್ಕೂ ರೈಲ್ವೆ ಇಲಾಖೆ ಮುಂದಾಗಿದೆ. ಆ ನಿಟ್ಟಿನಲ್ಲೇ ಈಗ ಪ್ರಯಾಣ ದರವನ್ನು ಏರಿಸಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...