alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಬಳಕೆದಾರರಿಗೆ “ನೆಮ್ಮದಿ”ಯ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಭಾರತೀಯ ಬಳಕೆದಾರರ ಡಾಟಾ ಉಲ್ಲಂಘನೆಯ ಘಟನೆಗಳನ್ನು ತಕ್ಷಣವೇ ವರದಿ ಮಾಡಲು ವಿಫಲವಾಗುವ ಕಂಪನಿಗಳಿಗೆ ಭಾರೀ ದಂಡ ವಿಧಿಸಲು ಸರ್ಕಾರ ಬಯಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇಂಟರ್ನೆಟ್ ಕಂಪನಿಗಳಾದ ಫೇಸ್‌ ಬುಕ್ ಮತ್ತು ಗೂಗಲ್‌ನಂತಹ ಕಂಪನಿಗಳಿಂದ ಭಾರತೀಯ ಬಳಕೆದಾರರ ವೈಯಕ್ತಿಕ ದತ್ತಾಂಶ ಉಲ್ಲಂಘನೆಗಳಾದ ಪ್ರಕರಣಗಳ ಹಿನ್ನೆಲೆಯಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಈ ಕಂಪನಿಗಳಲ್ಲಾದ ದತ್ತಾಂಶ ಉಲ್ಲಂಘನೆಗಳು ಸಾರ್ವಜನಿಕ ಪ್ರಕಟಣೆ ನೀಡಿದ ಮೇಲಷ್ಟೇ ಸರ್ಕಾರದ ಗಮನಕ್ಕೆ ಬಂದಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆ, 2008ರ ಅಡಿಯಲ್ಲಿ ಭದ್ರತಾ ಉಲ್ಲಂಘನೆ ಘಟನೆಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಅಥವಾ ಸೈಬರ್ ಏಜೆನ್ಸಿಗಳಿಗೆ ವರದಿ ಮಾಡದಿದ್ದರೆ ದಂಡ ವಿಧಿಸಲು ಅವಕಾಶವಿದೆ.

ಆದರೆ ಬಹುತೇಕ ಕಂಪನಿಗಳು ಸ್ಪಷ್ಟನೆ ಕೋರಿ ಅನೇಕ ಬಾರಿ ಪತ್ರ ಬರೆದರೂ ಪ್ರತಿಕ್ರಿಯಿಸುವುದಿಲ್ಲ. ಕಾರಣ, ದಂಡದ ಮೊತ್ತ ತೀರಾ ಕಡಿಮೆಯಿದ್ದು, 1 ಲಕ್ಷ ರೂ. ಅನ್ನೂ ದಾಟುವುದಿಲ್ಲ. ಇತ್ತೀಚಿನ ಘಟನೆಗಳು ಕಠಿಣ ದಂಡ ವಿಧಿಸಲು ಚಿಂತಿಸುವಂತೆ ಮಾಡಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯ ಡಾಟಾ ರಕ್ಷಣಾ ನಿಯಮದ ಅಂತಿಮ ಕರಡು ರಚಿಸುವ ಕಾರ್ಯದಲ್ಲಿದೆ. ಈ ವರ್ಷಾಂತ್ಯಕ್ಕೆ ಅನುಮೋದನೆಗಾಗಿ ಸಂಸತ್‌ ನ ಮುಂದೆ ಬರುವ ನಿರೀಕ್ಷೆಯಿದೆ. ಜತೆಗೆ ಐಟಿ ಕಾಯ್ದೆಯಲ್ಲಿ ಭಾರೀ ದಂಡ ಹೇರಲು ಅನುಕೂಲವಾಗುವಂತೆ ನಿಯಮ ಬದಲಾಯಿಸುವತ್ತ ಕೂಡಾ ಕಾರ್ಯೋನ್ಮುಖವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...