alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಡೆಬಿಟ್ ಕಾರ್ಡ್ ಬದಲಿಸಿಕೊಳ್ಳಲೇಬೇಕು, ಏಕೆ ಗೊತ್ತಾ?

ಹಾಲಿ ಬಳಸುತ್ತಿರುವ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೊಸ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳಿ ಎಂದು ನಿಮ್ಮ ಬ್ಯಾಂಕ್ ನಿಂದ ಸಂದೇಶ ಬಂದಿರಬಹುದಲ್ಲವೇ? ಯೋಚಿಸಬೇಡಿ, ಎಲ್ಲಾ ಬ್ಯಾಂಕ್ ಗಳು ಚಿಪ್ ಆಧಾರಿತ ಯುರೋಪ್ ಮಾಸ್ಟರ್ ಕಾರ್ಡ್ ವೀಸಾಗೆ ರೂಪಾಂತರಗೊಳಿಸುತ್ತಿದ್ದು, ಈ ಕಾರಣಕ್ಕೆ ದೇಶಾದ್ಯಂತ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಸಂದೇಶ ಕಳಿಸಿವೆ.

ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಉಚಿತವಾಗಿ ಕಾರ್ಡ್ ಬದಲಿಸಿಕೊಂಡು ಬರುವ ಅವಕಾಶವಿದ್ದು, ಈಗಿನ ಮ್ಯಾಗ್ನೆಟಿಕ್ ಕಾರ್ಡ್ ಬಳಕೆ ಮಾಡುವ ಅವಕಾಶ 2018 ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ.

ಎಲ್ಲಾ ಬ್ಯಾಂಕುಗಳು ಮ್ಯಾಗ್ನೆಟಿಕ್ ಕಾರ್ಡ್ ಬದಲು ಚಿಪ್ ಆಧಾರಿತ ಕಾರ್ಡ್ ಬಳಸಬೇಕೆಂದು ರಿಸರ್ವ್ ಬ್ಯಾಂಕ್ 2016 ರಲ್ಲೇ ಸೂಚನೆ ನೀಡಿತ್ತು. ಸಧ್ಯದ ಮಾಹಿತಿ ಪ್ರಕಾರ 39.4 ದಶಲಕ್ಷ ಸಕ್ರಿಯ ಕ್ರೆಡಿಟ್ ಕಾರ್ಡ್, 944 ದಶಲಕ್ಷ ಡೆಬಿಟ್ ಕಾರ್ಡ್ ಬಳಕೆಯಲ್ಲಿವೆ.

ಮ್ಯಾಗ್ನಟಿಕ್ ಕಾರ್ಡ್ ಅನ್ನು ಪಿಓಎಸ್ gಳಲ್ಲಿ ಕೇವಲ ಸ್ವೈಪ್ ಮಾಡಿ ಬಳಸಬಹುದು. ಆದರೆ, ಚಿಪ್ ಆಧಾರಿತ ಕಾರ್ಡ್ ಗಳಲ್ಲಿ ಚಿಪ್ ಮತ್ತು ಪಿನ್ ಕಡ್ಡಾಯವಾಗಿ ಬೇಕಾಗುತ್ತದೆ. ಈ ಮೂಲಕ ಸುರಕ್ಷಿತ ವ್ಯವಹಾರಕ್ಕೆ ಒತ್ತು ಕೊಡಲಾಗಿದೆ. ಹೊಸ ಕಾರ್ಡ್ ಮೋಸದ ವ್ಯವಹಾರ ನಿಯಂತ್ರಿಸುತ್ತದೆ ಎಂಬುದು ಬ್ಯಾಂಕ್ ಅಧಿಕಾರಿಗಳ ವಿವರಣೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...