alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ-ಫ್ರಿಡ್ಜ್ ಖರೀದಿ ಮಾಡುವವರಿಗೆ ನೆಮ್ಮದಿಯ ಸುದ್ದಿ

ಒಂದೆಡೆ ಹಬ್ಬದ ಸೀಸನ್, ಮತ್ತೊಂದೆಡೆ ಕುಸಿಯುತ್ತಲೇ ಇರುವ ರೂಪಾಯಿ ಬೆಲೆ. ಆದರೂ ಗೃಹೋಪಯೋಗಿ ಉಪಕರಣ ಫ್ರಿಜ್ ಹಾಗೂ ಟಿವಿಗಳ ಬೆಲೆ ಮಾತ್ರ ಏರಿಕೆ ಆಗಿಲ್ಲ. ಅಷ್ಟೇ ಅಲ್ಲ, ಇವುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಸದ್ಯಕ್ಕಂತೂ ಖಂಡಿತ ಇಲ್ಲ.

ಡಾಲರ್ ಎದುರು ರೂಪಾಯಿ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಒಂದು ಡಾಲರ್ ನ ವಿನಿಮಯ ಬೆಲೆ 72 ರೂಪಾಯಿ ದಾಟಿದೆ. ಜೊತೆಗೆ ಒಂದರ ಹಿಂದೊಂದರಂತೆ ಹಬ್ಬಗಳು ಬರುತ್ತಿವೆ. ಹೀಗಾಗಿ ಈ ಗೃಹೋಪಯೋಗಿ ವಸ್ತುಗಳ ಬೆಲೆ ಏರಬೇಕಾಗಿತ್ತು. ಆದರೂ ಆಂಥದ್ದೊಂದು ಸಾಹಸಕ್ಕೆ ಉತ್ಪಾದಕರು ಮುಂದಾಗಿಲ್ಲ.

ಏಕೆಂದರೆ ಡಾಲರ್ ಎದುರು ರೂಪಾಯಿ ಬೆಲೆ 72ಕ್ಕೆ ತಲುಪಿದ್ದರಿಂದ ಕಳೆದ ತಿಂಗಳಲ್ಲಷ್ಟೇ ಈ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೇ. 5ರಷ್ಟು ಹೆಚ್ಚಳ ಮಾಡಲಾಗಿತ್ತು. ಜೊತೆಗೆ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತಿತರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ. 28 ರಿಂದ ಶೇ. 18ಕ್ಕೆ ಇಳಿದಿದೆ.

ಮಾತ್ರವಲ್ಲದೆ ಕೇರಳದಲ್ಲಿನ ಪ್ರಕೃತಿ ವಿಕೋಪದಿಂದಾಗಿ ಓಣಂ ಸಮಯದ ವ್ಯಾಪಾರವೂ ಕೈತಪ್ಪಿದೆ. ಜೊತೆಗೆ ಕಂಪನಿಗಳು ಕೂಡ ಕಚ್ಚಾ ಪದಾರ್ಥಗಳ ಆಮದಿಗೆ ಡಾಲರ್ ಬೆಲೆ 72 ರೂಪಾಯಿ ಇರುವಾಗಲೇ ಆರ್ಡರ್ ಕೊಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಡಾಲರ್ ಎದುರು ರೂಪಾಯಿ ಬೆಲೆ 75 ದಾಟಿದರೆ ಅಥವಾ ಕಡೇ ಪಕ್ಷ ಹಬ್ಬದ ಸೀಸನ್ ಮುಗಿಯುವವರೆಗೆ ಈ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚಿಸದಿರಲು ಕಂಪನಿಗಳು ನಿರ್ಧರಿಸಿವೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...