alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ನೀಡ್ತಿದೆ 1,00,000 ರೂ. ಗಳಿಸುವ ಅವಕಾಶ

ಸರ್ಚ್ ದೈತ್ಯ ಗೂಗಲ್ ಹಿಂದಿನ ವರ್ಷ ಪೇಮೆಂಟ್ ಆ್ಯಪ್, ಗೂಗಲ್ ತೇಜ್ ಬಿಡುಗಡೆ ಮಾಡಿತ್ತು. ಈ ಆ್ಯಪ್ ಮೂಲಕ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ ಯುಪಿಐ ಮೂಲಕ ಪೇಮೆಂಟ್ ಮಾಡಬಹುದಾಗಿದೆ. ದೇಶದಲ್ಲಿ ಪೇಮೆಂಟ್ ಸರ್ವಿಸ್ ಗೆ ಪ್ರೋತ್ಸಾಹ ನೀಡಲು ಗೂಗಲ್ ತಮ್ಮ ಪೇಮೆಂಟ್ ಸರ್ವಿಸ್ ಹೆಸರನ್ನು ಬದಲಿಸಿದೆ. ಈಗ ಗೂಗಲ್ ಅದಕ್ಕೆ ಗೂಗಲ್ ಪೇ ಎಂದು ಹೆಸರಿಟ್ಟಿದೆ.

ಇದ್ರ ಜೊತೆ ಗೂಗಲ್ ಆಕರ್ಷಕ ಪ್ರತಿಫಲ ಯೋಜನೆಯನ್ನೂ ಘೋಷಣೆ ಮಾಡಿದೆ. ಕಂಪನಿ ಪ್ರಕಾರ, ಬಳಕೆದಾರರು ಗೂಗಲ್ ಪೇ ಮೂಲಕ ವ್ಯವಹಾರ ನಡೆಸಿದ್ರೆ 1,00,000 ರೂಪಾಯಿವರೆಗೆ ಗೆಲ್ಲುವ ಅವಕಾಶ ಸಿಗಲಿದೆಯಂತೆ. ಸೆಪ್ಟೆಂಬರ್ 18 ಬೆಳಿಗ್ಗೆ 9 ಗಂಟೆಯವರೆಗೆ ಹಣ ಗಳಿಸಲು ಅವಕಾಶವಿದೆ. ಅಲ್ಲಿಯವರೆಗೆ ಕನಿಷ್ಠ 5 ಬಾರಿ ಹಣ ವರ್ಗಾವಣೆ ಮಾಡಿರಬೇಕು.

ಗೂಗಲ್ ಪೇ ಆಫರ್ ಮೂಲಕ ಕಂಪನಿ 5 ಕೋಟಿ ರೂಪಾಯಿಯನ್ನು ಬಹುಮಾನ ರೂಪದಲ್ಲಿ ನೀಡ್ತಿದೆ. ಈ ಬಹುಮಾನವನ್ನು 5 ರೂಪಾಯಿಯಿಂದ 1,00,000 ರೂಪಾಯಿಗಳಾಗಿ ವಿಂಗಡನೆ ಮಾಡಲಾಗಿದೆ. ಇದ್ರ ಜೊತೆ ಗೂಗಲ್ ತ್ವರಿತ ಸಾಲವನ್ನೂ ನೀಡ್ತಿದೆ. ಸಾಲಕ್ಕಾಗಿ ಕಂಪನಿ ಕೆಲ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...