alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಮಾಡಿ ಜಿಯೋ ಫೋನ್ 2 ಬುಕ್ಕಿಂಗ್

ರಿಲಾಯನ್ಸ್ ಇಂಡಸ್ಟ್ರಿ ತನ್ನ 41 ನೇ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ 2 ಬಿಡುಗಡೆ ಮಾಡಿದೆ. ಈ ಫೋನ್ ಬೆಲೆ 2,999 ರೂಪಾಯಿ ನಿಗದಿಪಡಿಸಲಾಗಿದೆ. ಈ ಫೋನ್ ಖರೀದಿ ಮಾಡಲು ನೀವೂ ಆಸಕ್ತರಾಗಿದ್ದರೆ ಈ ಫೋನ್ ಎಲ್ಲಿ ಹಾಗೂ ಹೇಗೆ ಖರೀದಿ ಮಾಡೋದು ಎಂಬುದನ್ನು ತಿಳಿದುಕೊಳ್ಳಿ.

ರಿಲಾಯನ್ಸ್ ಜಿಯೋ ಫೋನ್ 2 ನಲ್ಲಿ ವಾಟ್ಸಾಪ್, ಫೇಸ್ಬುಕ್ ಮತ್ತು ಯುಟ್ಯೂಬ್ ಬಳಸಬಹುದಾಗಿದೆ. ಈ ಫೋನ್  2.4 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಎಸ್ ಡಿ ಕಾರ್ಡ್ ಮೂಲಕ 128 ಜಿಬಿ ಯವರೆಗೆ ವಿಸ್ತರಿಸಬಹುದಾಗಿದೆ.

ಫೋನ್ ನಲ್ಲಿ 2 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ ಸೆಲ್ಫಿಗಾಗಿ VGA ಕ್ಯಾಮರಾ ಅಳವಡಿಸಲಾಗಿದೆ. ಈ ಫೋನ್ ವೈ-ಫೈ, ಜಿಪಿಎಸ್ ಹಾಗೂ ಬ್ಲ್ಯೂ ಟೂತ್ ಗೆ ಸ್ಪಂದಿಸಲಿದೆ. ಈ ಫೋನ್ 24 ಭಾರತೀಯ ಭಾಷೆಗಳಿಗೆ ಬೆಂಬಲ ನೀಡಲಿದೆ. ಮೊಬೈಲ್ ಧ್ವನಿ ಆಜ್ಞೆಯನ್ನು ಬೆಂಬಲಿಸಲಿದೆ.

ಈ ಫೋನ್ ಜುಲೈ 15 ರಿಂದ ಬುಕ್ಕಿಂಗ್ ಲಭ್ಯವಾಗಲಿದೆ. ಗ್ರಾಹಕರು My Jio app ಹಾಗೂ ಅಧಿಕೃತ ವೆಬ್ ಸೈಟ್ www.jio.com ಮೂಲಕ ಫೋನ್ ಬುಕ್ ಮಾಡಬಹುದು. ಆಗಸ್ಟ್ 15ರಿಂದ Jio GigaFibe ಬ್ರಾಡ್ಬ್ಯಾಂಡ್ ಸೇವೆಗೆ ನೋಂದಣಿ ಪಡೆಯಬಹುದು. ಈ ಸೇವೆ ಇಡೀ ದೇಶದ ಜನರಿಗೆ ಲಭ್ಯವಾಗಲಿದೆ. 1,100 ನಗರಗಳಲ್ಲಿ ಈ ಸೇವೆ ಪ್ರಾರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...