alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮೊಬೈಲ್‌ ಮೇಲೆ ಸಿಗಲಿದೆ 3 ಸಾವಿರ ರೂ. ಡಿಸ್ಕೌಂಟ್‌

ಕಳೆದ ತಿಂಗಳ ಅಗ್ಗದ ಬೆಲೆಗೆ ಚಂದದ ಫೋನ್‌ ಬಿಡುಗಡೆ ಮಾಡಿದ್ದ ಒಪ್ಪೋ, ಇದೀಗ ಮತ್ತೊಂದು ಸಿಹಿ ಸಮಾಚಾರ ನೀಡಿದೆ. ಕಳೆದ ತಿಂಗಳು ಬಿಡುಗಡೆ ಮಾಡಿದ್ದ ಒಪ್ಪೋ ಎ5 ಮೇಲೆ 3 ಸಾವಿರ ರೂ. ರಿಯಾಯಿತಿ ಸಿಗಲಿದೆ. ಆದರೆ ಈ ಆಫರ್‌ ಇರುವುದು ಪೇಟಿಎಂ ಮಾಲ್‌ನಲ್ಲಿ ಮಾತ್ರ !

14,990 ರೂ.ಗೆ ಒಪ್ಪೋ ಎ5 ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ ಫೋನ್‌ ಖರೀದಿಸಲು ಸಾಧ್ಯವಾಗಿದೆ. ಇದಲ್ಲದೆ MOB10 ಪ್ರೋಮೋ ಕೋಡ್‌ ಬಳಸಿ, ಶೇ.10 ರಷ್ಟು ರಿಯಾಯಿತಿ, ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡುವ ಖರೀದಿಗೆ ಶೇ.10 ರಷ್ಟು ಕ್ಯಾಶ್‌ ಬ್ಯಾಕ್‌ ಸಹ ಸಿಕ್ಕಲಿದೆ. ಒಟ್ಟಾರೆ ಎ5 ಮೇಲೆ 3 ಸಾವಿರ ರೂ. ರಿಯಾಯಿತಿ ಪಡೆಯಬಹುದಾಗಿದೆ.

6.2 ಇಂಚಿನ ಎಚ್‌ಡಿ+ ಡಿಸ್ಪ್ಲೇ, 19:9 ಆಸ್‌ಪೆಕ್ಟ್‌ ರೆಶ್ಯು, 720×1520 ಪಿಕ್ಸೆಲ್ ರೆಸಲ್ಯೂಷನ್‌ ಹೊಂದಿದ್ದು, 4ಜಿಬಿ ರ್ಯಾಮ್, 32ಜಿಬಿ ಆಂತರಿಕ ಸ್ಟೋರೇಜ್‌ ಹಾಗೂ 256 ಜಿಬಿ ವರೆಗೆ ಎಕ್ಸ್‌ಪಾಂಡೇಬಲ್‌ ಮೆಮೊರಿ ಅಳವಡಿಸಬಲ್ಲ ತಂತ್ರಜ್ಞಾನಗಳನ್ನು ಹೊಂದಿದೆ.

ಕ್ವಾಲ್ಕೋಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಜತೆಗೆ, ಆಂಡ್ರಾಯ್ಡ್ 8.1 ಓರಿಯೋ ಕಲರ್‌ ಒಎಸ್‌ ಫೀಚರ್‌ ಹೊಂದಿದೆ. ಡ್ಯುವೆಲ್‌ ರಿಯರ್‌ ಕ್ಯಾಮರಾ ವ್ಯವಸ್ಥೆ ಇದ್ದು, ಇದರಲ್ಲಿ 13ಎಂಪಿ ಹಾಗೂ 2 ಎಂಪಿ ಕ್ಯಾಮರಾಗಳಿರಲಿವೆ. 4230ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ನೀಲಿ ಹಾಗೂ ಕೆಂಪು ಬಣ್ಣದಲ್ಲಿ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯ ಫೋನ್‌ ಎಂದೆನೆಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...