alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ರೈಲ್ವೇ ಕುರಿತು ಇಲ್ಲಿದೆ ಒಂದು ಅಚ್ಚರಿಯ ಮಾಹಿತಿ…!

ಅಚಲ್‌ಪುರ: 1853ರ ಬಳಿಕ ಭಾರತದ ವಾಣಿಜ್ಯ ಹಾಗೂ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಭಾರತೀಯ ರೈಲ್ವೆ ಬಗ್ಗೆ ಒಂದು ಅಚ್ಚರಿಯ ಅಂಶ ಇಲ್ಲಿದೆ. ದೇಶಾದ್ಯಂತ ವ್ಯಾಪಿಸಿರುವ ರೈಲ್ವೆ ಮಾರ್ಗಗಳಲ್ಲಿ ಸುಮಾರು 190 ಕಿ.ಮೀ. ಇನ್ನೂ ಭಾರತೀಯ ರೈಲ್ವೆ ಇಲಾಖೆ ಸುಪರ್ದಿಗೆ ಬಂದಿಲ್ಲ. ಖಾಸಗಿ ಸಂಸ್ಥೆ ಇದರ ಮಾಲೀಕತ್ವ ಉಳಿಸಿಕೊಂಡಿದೆ.

ಬ್ರಿಟಿಷ್‌ ಸರಕಾರದ ಕಾಲದಲ್ಲಿ ಖಾಸಗಿ ಸಂಸ್ಥೆಗಳು ರೈಲ್ವೆ ಮಾರ್ಗವನ್ನು ಪಡೆಯುತ್ತಿದ್ದವು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ರೈಲ್ವೆಮಾರ್ಗವನ್ನು ಪಡೆದ ಸಂಸ್ಥೆಗಳಲ್ಲಿ ಶಕುಂತಲಾ ರೈಲ್ವೇಸ್‌ ಸಹ ಒಂದಾಗಿದೆ.

ಮಹಾರಾಷ್ಟ್ರದ ಅಮ್ರಾವತಿ ಜಿಲ್ಲೆಯಲ್ಲಿನ 190 ಕಿ.ಮೀ. ದೂರದ ರೈಲು ಮಾರ್ಗ ಇಲಾಖೆಯಡಿ ಇಲ್ಲ. ಇನ್ನೂ ನ್ಯಾರೋಗೇಜ್‌ನಲ್ಲೇ ಇರುವ ಈ ಮಾರ್ಗ ಈಗಲೂ ಕಾರ್ಯಾಚರಣೆಯಲ್ಲಿದ್ದು, ಯವತ್‌ಮಲ್‌ನಿಂದ ಅಚಲ್‌ಪುರದ ನಡುವಿನ ಜನರ ಪ್ರಮುಖ ಸಂಪರ್ಕ ಸಾಧನವಾಗಿದೆ.

1910ರಲ್ಲಿ ಶಕುಂತಲಾ ರೈಲ್ವೇಸ್‌ ಆರಂಭಗೊಂಡಿತ್ತು. ವಿದರ್ಭದಿಂದ ಹತ್ತಿಯನ್ನು ರಫ್ತು ಮಾಡಲು ಈ ಮಾರ್ಗವನ್ನು ಪ್ರಮುಖವಾಗಿ ಬಳಸಲಾಗುತ್ತಿತ್ತು. 190 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಸಿದ್ದಪಡಿಸಲು 6 ವರ್ಷಗಳು ಬೇಕಾಗಿದ್ದು, 1916ರಲ್ಲಿ ಈ ಮಾರ್ಗ ಕಾರ್ಯಾಚರಣೆ ಆರಂಭಗೊಂಡಿತ್ತು. ವಿದರ್ಭವನ್ನು ಇಂದಿನ ಮುಂಬೈಗೆ ಸಂಪರ್ಕಿಸಲು ಇದು ಹತ್ತಿರದ ಮಾರ್ಗವಾಗಿತ್ತು. ಮುಂಬೈನಿಂದ ಸರಕುಗಳನ್ನು ಇಂಗ್ಲೆಂಡ್‌ಗೆ ರಫ್ತು ಮಾಡಲಾಗುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...