alex Certify
ಕನ್ನಡ ದುನಿಯಾ       Mobile App
       

Kannada Duniya

2017 ರ ಬಹು ನಿರೀಕ್ಷಿತ ಚಿತ್ರಗಳು….

movie

2016 ಸಿಹಿ ಕಹಿಯ ಮಿಶ್ರಣವಾಗಿತ್ತು. ಸಿನಿ ಪ್ರಿಯರಿಗೆ ಅಚ್ಚರಿ, ನಿರಾಸೆ, ಸಂತಸ ಎಲ್ಲವೂ ಆಗಿದೆ. ಕೆಲ ಬಿಗ್ ಸ್ಟಾರ್ ಗಳಿಗೆ ಭಾರೀ ನಿರಾಸೆಯಾದ್ರೆ, ಇನ್ನು ಕೆಲವರು ವೃತ್ತಿಜೀವನದ ಅತ್ಯಂತ ಯಶಸ್ವಿ ಸಮಯವನ್ನು ಕಂಡಿದ್ದಾರೆ. ಇನ್ನೇನು ಈ ವರ್ಷ ಮುಗಿದೇ ಹೋಯ್ತು. 2017 ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಾಗಿ ಕೆಲವು ತಾರೆಯರು ಸಜ್ಜಾಗಿದ್ದಾರೆ. ಹೊಸ ವರ್ಷದ ಬಹುನಿರೀಕ್ಷಿತ 10 ಚಿತ್ರಗಳು ಯಾವುದು ಅನ್ನೋದನ್ನು ನೋಡೋಣ.

rayees

‘ರಯೀಸ್’

ಶಾರುಖ್ ಅಭಿನಯದ ‘ರಯೀಸ್’ ಚಿತ್ರ 2016 ರಲ್ಲೇ ಬಿಡುಗಡೆಯಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ‘ರಯೀಸ್’ 2017 ರಲ್ಲಿ ತೆರೆ ಕಾಣ್ತಾ ಇದೆ. ಶಾರುಖ್ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ಪಾಕಿಸ್ತಾನದ ನಟಿ ಮಾಹಿರಾ ಖಾನ್ ಯಾವ ರೀತಿ ಕಮಾಲ್ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಿಗಿದೆ. 2017 ರ ಜನವರಿ 25 ರಂದು ‘ರಯೀಸ್’ ರಿಲೀಸ್ ಆಗಲಿದೆ.

bahubali

‘ಬಾಹುಬಲಿ-ದಿ ಕನ್ ಕ್ಲೂಶನ್’

2015 ರಲ್ಲಿ ತೆರೆಕಂಡಿದ್ದ ರಾಜಮೌಳಿ ನಿರ್ದೇಶನದ ‘ಬಾಹುಬಲಿ – ದಿ ಬಿಗಿನಿಂಗ್’ ಚಿತ್ರ ಬಾಕ್ಸಾಫೀಸ್ ಚಿಂದಿ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿತ್ತು. ಇದೀಗ ಆ ಚಿತ್ರದ ಸೀಕ್ವಲ್ ‘ಬಾಹುಬಲಿ-ದಿ ಕನ್ ಕ್ಲೂಶನ್’ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಅನ್ನೋ ಪ್ರಶ್ನೆಗೆ 2017 ರ ಎಪ್ರಿಲ್ 27ರಂದು ಉತ್ತರ ಸಿಗಲಿದೆ.

judwa

‘ಜುಡ್ವಾ 2’

ಡೇವಿಡ್ ಧವನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸಲ್ಮಾನ್ ಅಭಿನಯದ ‘ಜುಡ್ವಾ’ ಚಿತ್ರ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಜುಡ್ವಾ ಚಿತ್ರದ ಸೀಕ್ವಲ್ ಹೊಸ ವರ್ಷದಲ್ಲಿ ತೆರೆಗೆ ಅಪ್ಪಳಿಸಲಿದೆ. ಸಲ್ಮಾನ್ ಜೊತೆಗೆ ವರುಣ್ ಧವನ್ ಕಾಣಿಸಿಕೊಳ್ತಿದ್ದು, ಜಾಕ್ವೆಲಿನ್ ಹಾಗೂ ತಾಪ್ಸಿ ಪನ್ನು ‘ಜುಡ್ವಾ-2’ ಚಿತ್ರಕ್ಕೆ ನಾಯಕಿಯರು.

tubelight

‘ಟ್ಯೂಬ್ ಲೈಟ್’

2016 ಸಲ್ಮಾನ್ ಖಾನ್ ಗೆ ಭರ್ಜರಿ ಯಶಸ್ಸು ತಂದುಕೊಟ್ಟ ವರ್ಷ. 2017 ರಲ್ಲಿ ಕೂಡ ಅಭಿಮಾನಿಗಳನ್ನು ರಂಜಿಸಲು ಸಲ್ಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಕಬೀರ್ ಖಾನ್ ನಿರ್ದೇಶನದ ‘ಟ್ಯೂಬ್ ಲೈಟ್’ ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದು, 2017 ರ ಜೂನ್ 26ರಂದು ಇದು ಬಿಡುಗಡೆಯಾಗಲಿದೆ.

padmavati-10-1476105091-12-1476244685

‘ಪದ್ಮಾವತಿ’

ಪದ್ಮಾವತಿ ಬಾಲಿವುಡ್ ನ ಅತ್ಯಂತ ದುಬಾರಿ ಚಿತ್ರವೆಂದೇ ಹೇಳಲಾಗ್ತಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಯಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ 2017 ರ ನವೆಂಬರ್ 17ಕ್ಕೆ ತೆರೆ ಕಾಣಲಿದೆ.

imtiyaaz

ಇಮ್ತಿಯಾಜ್ ಅಲಿ ಅವರ ಹೆಸರಿಡದ ಚಿತ್ರ….

ಇಮ್ತಿಯಾಜ್ ಅಲಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಶಾರುಖ್ ಹಾಗೂ ಅನುಷ್ಕಾ ಶರ್ಮಾ ನಟಿಸಲಿದ್ದಾರೆ. ಸದ್ಯ ಇದಕ್ಕೆ ‘ದಿ ರಿಂಗ್’ ಅಂತಾ ಹೆಸರಿಡಲಾಗಿದೆ. ಯುರೋಪ್ ಪ್ರವಾಸದ ವೇಳೆ ನಿಶ್ಚಿತಾರ್ಥದ ರಿಂಗ್ ಕಳೆದುಕೊಳ್ಳುವ ಗುಜರಾತಿ ಹುಡುಗಿಯೊಬ್ಬಳ ಕಥೆ ಇದು. 2017 ರ ಆಗಸ್ಟ್ 11ರಂದು ಈ ರೊಮ್ಯಾಂಟಿಕ್ ಚಿತ್ರ ಬಿಡುಗಡೆಯಾಗಲಿದೆ.

jagga

‘ಜಗ್ಗಾ ಜಾಸೂಸ್’

ಅನುರಾಗ್ ಬಸು ನಿರ್ದೇಶನದ ಚಿತ್ರ ‘ಜಗ್ಗಾ ಜಾಸೂಸ್’. ಈ ಚಿತ್ರದಲ್ಲಿ ಮಾಜಿ ಪ್ರೇಮಿಗಳಾದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ನಟಿಸುತ್ತಿದ್ದಾರೆ. ತನ್ನ ಫಸ್ಟ್ ಲುಕ್ ಹಾಗೂ ಟ್ರೇಲರ್ ನಿಂದ ಈಗಾಗ್ಲೇ ಕುತೂಹಲ ಹುಟ್ಟಿಸಿದೆ. 2017 ರ ಎಪ್ರಿಲ್ 7ಕ್ಕೆ ಜಗ್ಗಾ ಜಾಸೂಸ್ ಪ್ರೇಕ್ಷಕರ ಮುಂದೆ ಬರಲಿದ್ದಾನೆ.

golmal

‘ಗೋಲ್ ಮಾಲ್ ಅಗೇನ್’

ರೋಹಿತ್ ಶೆಟ್ಟಿ ಅವರ ‘ಗೋಲ್ ಮಾಲ್’ ಭರ್ಜರಿ ಹಿಟ್ ಚಿತ್ರ. ಗೋಲ್ ಮಾಲ್ ಸೀಕ್ವಲ್ ಗಳು ಕೂಡ ಭಾರೀ ಸದ್ದು ಮಾಡಿದ್ವು. ಹೊಸ ವರ್ಷದಲ್ಲಿ ಪ್ರೇಕ್ಷಕರನ್ನು ನಗಿಸಲು ‘ಗೋಲ್ ಮಾಲ್ ಅಗೇನ್’ ಹೆಸರಲ್ಲಿ ಬರ್ತಿದೆ.

2-0

‘2.0’

2.0 ಕೂಡ ಭಾರತದ ಅತ್ಯಂತ ದುಬಾರಿ ಚಿತ್ರ. ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ಅಕ್ಷಯ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸ್ತಿದ್ದಾರೆ. ರಜನಿ ಸೂಪರ್ ಹೀರೋ ಚಿಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಅಕ್ಷಯ್ ಇದರಲ್ಲಿ ವಿಲನ್. ಈ ಸಿನೆಮಾ ಕೂಡ 2017ರಲ್ಲಿ ತೆರೆಗೆ ಬರಲಿದೆ.

rangoon

‘ರಂಗೂನ್’

ವಿಶಾಲ್ ಭಾರದ್ವಾಜ್ ಅವರ ಕನಸಿನ ಚಿತ್ರ ಇದು. ತ್ರಿಕೋನ ಪ್ರೇಮಕಥೆ. ಎರಡನೇ ವಿಶ್ವ ಯುದ್ಧದ ಸಮಯವನ್ನು ಪ್ರೇಕ್ಷಕರೆದುರು ಬಿಚ್ಚಿಡಲಿದೆ. ಸೈಫ್ ಅಲಿ ಖಾನ್, ಕಂಗನಾ ರನಾವತ್ ಹಾಗೂ ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. 2017 ರ ಫೆಬ್ರವರಿ 24ಕ್ಕೆ ರಂಗೂನ್ ಬಿಡುಗಡೆಯಾಗಲಿದೆ.

ಇನ್ನು ಸಲ್ಮಾನ್ ಖಾನ್ ರ ‘ಟೈಗರ್ ಜಿಂದಾ ಹೈ’ ಹೃತಿಕ್ ರೋಷನ್ ನಟನೆಯ ‘ಕಾಬಿಲ್’ ಕೂಡ 2017ರಲ್ಲೇ ತೆರೆ ಕಾಣಲಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...