alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಬೇಡಿಕೆ: ಬಯಲಾಗಿದೆ ಬಡಾ ದೋಖಾ…!

ಬೆಂಗಳೂರು: ಫೆಬ್ರವರಿ 1 ರಿಂದ ಐ.ಎಸ್.ಐ. ಮಾರ್ಕ್ ಹೊಂದಿರುವ ಫುಲ್ ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕಂಡ ಕಂಡ ಹೆಲ್ಮೆಟ್ ಖರೀದಿಸಿದ್ದವರೆಲ್ಲಾ ಈಗ ಮತ್ತೆ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಅರ್ಧ ಹೆಲ್ಮೆಟ್, ಐ.ಎಸ್.ಐ. ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಬಳಸಿದರೆ ಪೆನಾಲ್ಟಿ ಗ್ಯಾರಂಟಿ. ಈಗಾಗಲೇ ಪೊಲೀಸರು ಫೀಲ್ಡಿಗಿಳಿಯಲು ಸಜ್ಜಾಗಿದ್ದಾರೆ.

ಇದರಿಂದಾಗಿ ಜನ ಐ.ಎಸ್.ಐ. ಮಾರ್ಕ್ ನ ಫುಲ್ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಳದಂಧೆಕೋರರು ಡೂಪ್ಲಿಕೇಟ್ ಹೆಲ್ಮೆಟ್ ಗಳಿಗೆ ಐ.ಎಸ್.ಐ. ಮಾರ್ಕ್ ಸ್ಟಿಕರ್ ಗಳನ್ನು ಹಚ್ಚಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೆಲವು ಹೆಲ್ಮೆಟ್ ಮಾರಾಟಗಾರರು ಐ.ಎಸ್.ಐ. ಸ್ಟಿಕರ್ ಗಳನ್ನು ಹಚ್ಚಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದಾರೆ. ಜನ ಕೂಡ ಇದನ್ನು ತಿಳಿಯದೇ ಹಿಂದೆ ಮುಂದೆ ನೋಡದೇ ಖರೀದಿಸುತ್ತಾರೆ.

ಪಕ್ಕಾ ಒರಿಜಿನಲ್ ಹೆಲ್ಮೆಟ್ ಎಂದು ಖರೀದಿಸಿದಲ್ಲಿ ಬೇಸ್ತು ಬೀಳುವುದು ಗ್ಯಾರಂಟಿ. ಯಾವುದಕ್ಕೂ ಮೊದಲು ಪರಿಶೀಲಿಸಿ ನಂತರದಲ್ಲಿ ಖರೀದಿಸುವುದು ಒಳ್ಳೆಯದು. ಇಲ್ಲವಾದರೆ ಅಪಘಾತದ ವೇಳೆ ಅಪಾಯ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...