alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿ ಮಾಲೀಕರ ಮುಷ್ಕರದಿಂದ ಸರಕು ಸಾಗಣೆಯಲ್ಲಿ ವ್ಯತ್ಯಯ

ಮುಂಬೈ: ಟೋಲ್‌ ವ್ಯವಸ್ಥೆ, ಡೀಸೆಲ್‌ಗೆ ದೇಶಾದ್ಯಂತ ಏಕರೂಪದ ತೆರಿಗೆ ವಿಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಿಸಿ  ಲಾರಿ ಮಾಲೀಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಟರ ಆರಂಭಿಸಿದ್ದಾರೆ. ಈ ಸಂಬಂಧ ದೇಶದ ಅನೇಕ ಭಾಗಗಳಲ್ಲಿ ತರಕಾರಿ ಹಾಗೂ ಸರಕು ಸಾಗಾಣೆಯಲ್ಲಿ ವ್ಯತ್ಯಯವಾಗಲಿದೆ.

ಪ್ರಸ್ತುತ ಟೋಲ್‌ ಗೇಟ್‌ ಗಳಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದ್ದು, ಈ ವ್ಯವಸ್ಥೆಯನ್ನು ಬದಲಿಸಬೇಕು. ಕ್ಷಿಪ್ರ ಟೋಲ್‌ ತೆಗೆದುಕೊಳ್ಳುವಂತಾಗಬೇಕು. ಇದರಿಂದ ಇಂಧನವೂ ಉಳಿತಾಯವಾಗುತ್ತದೆ. ಅಂತೆಯೇ ಡೀಸೆಲ್‌ ಮೇಲಿನ ತೆರಿಗೆ ದೇಶಾದ್ಯಂತ ಒಂದೇ ರೀತಿ ಇರಬೇಕು ಎಂದು ಅಖಿಲ ಭಾರತೀಯ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌(ಎಐಎಂಟಿಸಿ) ಒತ್ತಾಯಿಸಿದೆ.

ಮಹಾರಾಷ್ಟ್ರಕ್ಕೆ ದಿನ ನಿತ್ಯ 60 ಸಾವಿರ ಭಾರಿ ವಾಹನಗಳು ತರಕಾರಿಗಳನ್ನು ತೆಗೆದುಕೊಂಡು ಬರುತ್ತವೆ. ಮುಷ್ಕರದಿಂದ ಸುಮಾರು 16 ಲಕ್ಷ ವಾಹನಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಎಂದು ಎಐಎಂಟಿಸಿ ಅಧ್ಯಕ್ಷ ಬಲ್‌ ಮಲ್ಕಿಟ್‌ ಸಿಂಗ್‌ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...