alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ನೀಡಿದೆ ಈ ಬ್ಯಾಂಕ್

ಹೆಚ್.ಡಿ.ಎಫ್.ಸಿ. ಬ್ಯಾಂಕ್ ಬೇಸ್ ದರವನ್ನು ಏರಿಕೆ ಮಾಡಿದೆ. 0.20 ರಷ್ಟು ಏರಿಕೆ ಮಾಡಿ ಬೇಸ್ ದರವನ್ನು ಶೇಕಡಾ 9.15 ಕ್ಕೆ ತಂದು ನಿಲ್ಲಿಸಿದೆ.ಇದ್ರಿಂದ ಎಲ್ಲ ಹಳೆ ಸಾಲಗಳು ದುಬಾರಿಯಾಗಲಿವೆ.

ಬ್ಯಾಂಕ್ MCLR ಮೇಲೆ ಸಾಲ ನೀಡುತ್ತದೆ. ಹೆಚ್.ಡಿ.ಎಫ್.ಸಿ. ಬೇಸ್ ರೇಟ್ ಮೇಲೆ ಪಡೆದ ಮನೆ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ಬಗೆಯ ಸಾಲಗಳು ದುಬಾರಿಯಾಗಲಿವೆ. ಕೆಲ ದಿನಗಳ ಹಿಂದಷ್ಟೆ ಬ್ಯಾಂಕ್ MCLR ದರವನ್ನೂ ಏರಿಕೆ ಮಾಡಿದೆ. ಈ ತಿಂಗಳು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಒಂದೇ ಅಲ್ಲ ಬಹುತೇಕ ಎಲ್ಲ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿವೆ.

ಎಸ್.ಬಿ.ಐ., ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಅನೇಕ ಬ್ಯಾಂಕ್ ಗಳು ಶೇಕಡಾ 0.05 ರಿಂದ ಶೇಕಡಾ 0.20 ರವರೆಗೆ MCLR ದರವನ್ನು ಹೆಚ್ಚಳ ಮಾಡಿವೆ. ಎಸ್.ಬಿ.ಐ. ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್ MCLR ದರವನ್ನು ಶೇಕಡಾ 0.20ರಷ್ಟು ಹೆಚ್ಚಳ ಮಾಡಿವೆ.ಇದ್ರಿಂದ ಎಲ್ಲ ರೀತಿಯ ಸಾಲಗಳು ದುಬಾರಿಯಾಗಿವೆ. ಹೆಚ್.ಡಿ.ಎಫ್.ಸಿ. ಮೊದಲು ಬೇಸ್ ದರದ ಮೇಲೆ ಸಾಲ ನೀಡ್ತಾಯಿತ್ತು. ಈಗ MCLR ಮೇಲೆ ಸಾಲ ನೀಡಲು ಶುರು ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...