alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್.ಸಿ.ಎಲ್. ಸಿಇಓ ವೇತನ ಕೇಳಿದ್ರೆ ದಂಗಾಗ್ತೀರಾ…!

ನವದೆಹಲಿ: ನಾಲ್ಕು ಪ್ರಮುಖ ಐಟಿ ಕಂಪೆನಿಗಳ ಪೈಕಿ ಹೆಚ್.ಸಿ.ಎಲ್. ಟೆಕ್ನಾಲಜಿಯು ತನ್ನ ಸಿಇಓಗೆ ಅತಿ ಹೆಚ್ಚಿನ ವೇತನ ನೀಡಿ ಗಮನ ಸೆಳೆದಿದೆ.

ಹೆಚ್.ಸಿ.ಎಲ್. ಸಿಇಓ ವಿಜಯಕುಮಾರ್ 2017-18 ರಲ್ಲಿ 33.13 ಕೋಟಿ ರೂ. ವೇತನ ಪಡೆದಿದ್ದಾರೆ. ಹೆಚ್.ಸಿ.ಎಲ್. ಟೆಕ್ ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. 2016 ರ ಅಕ್ಟೋಬರ್ ನಲ್ಲಿ ಆಯ್ಕೆಗೊಂಡಿದ್ದ ವಿಜಯ್ ಕುಮಾರ್ ಅವರನ್ನು 2017ರ ಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮತ್ತು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಅಂದ ಹಾಗೆ ಇನ್ಫೋಸಿಸ್ ಸಿಇಓ ವಿಶಾಲ್ ಸಿಕ್ಕಾ ಅವರು ವಾರ್ಷಿಕ 13 ಕೋಟಿ, 2018ರ ಜನವರಿಯಲ್ಲಿ ಇದೇ ಹುದ್ದೆಗೆ ನೇಮಕಗೊಂಡ ಸಲೀಲ್ ಪರೇಖ್ ಅವರಿಗೆ 16.25 ಕೋಟಿ, ಟಾಟಾ ಕನ್ಸಲ್ಟೆಂಟ್ ನ ಸಿಇಓ ರಾಜೇಶ್ ಗೋಪಿನಾಥನ್ 11.02 ಕೋಟಿ ರೂ. (1.02. ವೇತನ ಮತ್ತು 10 ಕೋಟಿ ರೂ. ಇತರೆ), ವಿಪ್ರೋ ಸಿಇಓ ಅಬಿದ್ಅಲಿ ನಿಮುಚಲ್ ಅವರು 18.2 ಕೋಟಿ ರೂ. ಪಡೆದುಕೊಂಡಿದ್ದಾರೆ.

ಹೆಚ್.ಸಿ.ಎಲ್. ಟೆಕ್ ನಲ್ಲಿ 1 ಕೋಟಿ ರೂ. ಗಿಂತ ಹೆಚ್ಚಿನ ವೇತನ ಪಡೆದುಕೊಳ್ಳುತ್ತಿರುವವರ ಸಂಖ್ಯೆ 23 ರಿಂದ 28 ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...