alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಆರಂಭಿಕ ವೇತನವೇ 2.58 ಲಕ್ಷ ರೂಪಾಯಿ…!!!

ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಸರಿಯಾದ ಉದ್ಯೋಗ ಸಿಗುವುದೇ ಕಷ್ಟ. ಆದರೆ ಮಹಿಳೆಯರಿಗೆಂದೇ ಇಲ್ಲೊಂದು ಕೋರ್ಸ್ ಇದೆ. ಇದನ್ನು ಮುಗಿಸಿದರೆ ಉದ್ಯೋಗ ಖಚಿತ. ಸಂಬಳ ಎಷ್ಟು ಕೊಡುತ್ತಾರೋ ಎಂದು ಯೋಚಿಸಬೇಕಾಗಿಲ್ಲ, ಏಕೆಂದರೆ ಇಲ್ಲಿ ಆರಂಭಿಕ ವೇತನವೇ ವರ್ಷಕ್ಕೆ 2.58 ಲಕ್ಷ ರೂಪಾಯಿ.

ಹೌದು…..ಎಚ್‍ಸಿಎಲ್ ಸಂಸ್ಥೆ ಐಬಿಲೀವ್ ಎಂಬ ವೃತ್ತಿಕೇಂದ್ರಿತ ಯೋಜನೆಯೊಂದನ್ನು ಆರಂಭಿಸಿದೆ. ಮಹಿಳಾ ಸಬಲೀಕರಣಕ್ಕಾಗಿ ಈ ಕೋರ್ಸ್ ರೂಪಿಸಿದೆ. ಐಟಿ ಕೆಲಸ ಬಿಟ್ಟ ಮಹಿಳೆಯರಿಗೆ ಮತ್ತೆ ಅವಕಾಶ ನೀಡಿ ಅವರನ್ನು ಪುನಃ ಐಟಿಯತ್ತ ಸೆಳೆಯುವುದು ಇದರ ಉದ್ದೇಶ.

ಈ ಕೋರ್ಸ್‍ಗೆ ಸೇರಿಕೊಳ್ಳುವವರಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೃತ್ತಿಕೌಶಲಗಳ ಕುರಿತು ತರಬೇತಿ ನೀಡಿ ಬೇಡಿಕೆಯ ಉದ್ಯೋಗಕ್ಕೆ ಸಿದ್ಧಗೊಳಿಸಲಾಗುವುದು. ಆಕಾಂಕ್ಷಿಗಳ ಅರ್ಹತೆ ಮೇರೆಗೆ ತರಬೇತಿಯ ಅವಧಿ ಅವಲಂಬಿತವಾಗಿರುತ್ತದೆ. ಮಾರ್ಚ್ 28ರಂದು ಈ ಯೋಜನೆ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಸ್ಥೆ ತಿಳಿಸಿದೆ.

ಯಾವುದೇ ವಿದ್ಯಾರ್ಹತೆ, ಐಟಿ ಅಥವಾ ನಾನ್-ಐಟಿ ಉದ್ಯೋಗದಲ್ಲಿರುವ ಅಥವಾ ಸದ್ಯ ಉದ್ಯೋಗ ಬಿಟ್ಟು ಬ್ರೇಕ್‍ನಲ್ಲಿರುವ…..ಹೀಗೆ ಯಾವುದೇ ವರ್ಗದ ಮಹಿಳೆಯರಿಗೂ ಇಲ್ಲಿ ಅವಕಾಶವಿದೆ. ಕೋರ್ಸ್‍ನ ಫೀಸ್ 1 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಹಾಗೂ ಕೋರ್ಸ್‍ಗೆ ತಕ್ಕಂತೆ ಫೀಸ್ ವ್ಯತ್ಯಾಸವಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...