alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ದೇಗುಲಕ್ಕೆ 1 ಕೋಟಿ ರೂ. ನೀಡಿದ ಉದ್ಯಮಿ

hcl-chairman-shiv-nadar-offers-rs-one-crore-to-shrine

ದೇಶದ ದೊಡ್ಡ ಐಟಿ ಕಂಪನಿಗಳಲ್ಲೊಂದಾದ ಎಚ್ ಸಿ ಎಲ್ ನ ಅಧ್ಯಕ್ಷ ಶಿವ್ ನಾಡಾರ್ ಅವರು ತಿರುಪತಿ ವೆಂಕಟೇಶ್ವರ ದೇಗುಲಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಭಾನುವಾರ ವೆಂಕಟೇಶ್ವರನ ದರ್ಶನಕ್ಕಾಗಿ ಬಂದ ನಾಡಾರ್ ಅವರು, ಪೂಜೆ, ಅರ್ಚನೆಗಳಾದ ನಂತರ ಮಂದಿರದ ಕಾರ್ಯಕಾರಿ ಅಧಿಕಾರಿ ಡಿ. ಸಾಂಬಶಿವ ಅವರಿಗೆ 1 ಕೋಟಿ ರೂ. ಗಳ ಚೆಕ್ ಹಸ್ತಾಂತರಿಸಿದರು. ಈ ಹಣವನ್ನು ಅನಾಥ ಮತ್ತು ನಿರಾಶ್ರಿತ ಮಕ್ಕಳಿಗಾಗಿ ಸ್ಥಾಪಿತವಾಗಿರುವ ಶ್ರೀ ವೆಂಕಟೇಶ್ವರ ಬಾಲಮಂದಿರ ಟ್ರಸ್ಟ್ ಗಾಗಿ ಉಪಯೋಗಿಸಿ ಎಂದು ನಾಡಾರ್ ಹೇಳಿದ್ದಾರೆ.

ಶಿವ್ ನಾಡರ್ ಅವರ ಹೊರತಾಗಿ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಕೂಡ ಭಾನುವಾರ ತಿರುಪತಿಗೆ ಭೇಟಿ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...