alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧಾನಸಭೆಗೆ ಸೈಕಲ್ ನಲ್ಲಿ ಬಂದ ಸಿಎಂ..!

HARYANA CM CYCLE 1ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅವರ ಸಂಪುಟದ ಸಚಿವರು ಮತ್ತು ಶಾಸಕರು ಇಂದು ವಿಧಾನಸಭೆಗೆ ಸೈಕಲ್ ನಲ್ಲಿ ಬಂದಿದ್ದಾರೆ. ಪರಿಸರ ಸ್ನೇಹಿ ಸಾರಿಗೆ ಬಳಸುವಂತೆ ಸಂದೇಶ ಸಾರುವುದು ಇವರ ಉದ್ದೇಶ.

ಸಿಎಂ ನಿವಾಸದಿಂದ ಅಸೆಂಬ್ಲಿವರೆಗೆ ಸುಮಾರು 1 ಕಿಲೋ ಮೀಟರ್ ದೂರ ಎಲ್ಲರೂ ಸೈಕಲ್ ತುಳಿದ್ರು. ಮಹಿಳಾ ಜನಪ್ರತಿನಿಧಿಗಳೆಲ್ಲ ಇ-ರಿಕ್ಷಾ ಏರಿ ಬಂದ್ರು. ಇದು ಕೇವಲ ಸಾಂಕೇತಿಕ, ಆದ್ರೆ ಸೈಕಲ್ ಬಳಕೆ ಆರೋಗ್ಯಕ್ಕೆ ಒಳಿತು, ಎಲ್ಲರೂ ಪರಿಸರ ಸ್ನೇಹಿ ಸಾರಿಗೆಯನ್ನು ನೆಚ್ಚಿಕೊಳ್ಳಬೇಕು ಅಂತಾ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಕಳೆದ ಶುಕ್ರವಾರ ಹರಿಯಾಣ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಅಂದು ಬಿಜೆಪಿ ಶಾಸಕ ಪವನ್ ಕುಮಾರ್ ಸೈನಿ ಡಿಫರೆಂಟ್ ಆಗಿ ಅಸೆಂಬ್ಲಿಗೆ ಬಂದ್ರು. ತಮ್ಮ ಕ್ಷೇತ್ರ ಕುರುಕ್ಷೇತ್ರದಿಂದ ಸುಮಾರು 110 ಕಿಲೋಮೀಟರ್ ವರೆಗೆ ಸೈಕಲ್ ತುಳಿದುಕೊಂಡೇ ಚಂಡಿಗಢದಲ್ಲಿರುವ ವಿಧಾನಸಭೆಗೆ ಆಗಮಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...