alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತರ ಪಟ್ಟಿಯಲ್ಲಿ ಗುಜರಾತಿಗರದ್ದೇ ಮೇಲುಗೈ

Gujaratis dominate Forbes India rich listಫೋರ್ಬ್ಸ್ ಮ್ಯಾಗಜೀನ್ 100 ಮಂದಿ ಅತಿ ದೊಡ್ಡ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗುಜರಾತಿ ಮೂಲದವರೇ ಅಧಿಕವಾಗಿದ್ದಾರೆ.

ಸತತ 9 ನೇ ಬಾರಿಗೆ ಭಾರತದ ಅತಿ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗುಜರಾತ್ ಮೂಲದ ಮುಕೇಶ್ ಅಂಬಾನಿ 22.7 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ ಅವರ ಸಹೋದರ ಅನಿಲ್ ಅಂಬಾನಿ 3.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ 32 ನೇ ಸ್ಥಾನದಲ್ಲಿದ್ದಾರೆ.

ಮತ್ತೊಬ್ಬ ಗುಜರಾತಿ, ಸನ್ ಫಾರ್ಮಾದ ದಿಲೀಪ್ ಸಾಂಘ್ವಿ 16.9 ಬಿಲಿಯನ್ ಆಸ್ತಿ ಮೌಲ್ಯದೊಂದಿಗೆ ಭಾರತದ ಅತಿ ದೊಡ್ಡ ಸಿರಿವಂತರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ 15 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, 8.3 ಬಿಲಿಯನ್ ಆಸ್ತಿ ಮೌಲ್ಯವನ್ನು ಹೊಂದಿರುವ ಉದಯ್ ಕೋಟಾಕ್ 11 ನೇ ಸ್ಥಾನ, 6.3 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಗೌತಮ್ ಆದಾನಿ 13 ನೇ ಸ್ಥಾನದಲ್ಲಿದ್ದಾರೆ.

ಭಾರತದ 100 ಮಂದಿ ಅತಿ ದೊಡ್ಡ ಸಿರಿವಂತರ ಪಟ್ಟಿಯಲ್ಲಿರುವ ಇತರೆ ಗುಜರಾತಿಗರ ಪೈಕಿ ಶಶಿ ಮತ್ತು ರವಿ ರೂಯಾ, ಪಂಕಜ್ ಪಟೇಲ್, ಕರ್ಸನ್ ಭಾಯ್ ಪಟೇಲ್, ರಾಜೇಶ್ ಮೆಹ್ತಾ, ನಿರವ್ ಮೋದಿ, ಹಲವು ತಲೆಮಾರುಗಳಿಂದ ಗುಜರಾತಿನಲ್ಲಿ ನೆಲೆಸಿರುವ ಪಾರ್ಸಿ ಕುಟುಂಬಗಳಾದ ಪಲ್ಲೋಂಜಿ ಮಿಸ್ತ್ರಿ, ಗೋದ್ರೆಜ್ ಕುಟುಂಬ, ಸೈರಸ್ ಪೂನಾವಾಲಾ ಮೊದಲಾದವರು ಸ್ಥಾನ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...