alex Certify
ಕನ್ನಡ ದುನಿಯಾ       Mobile App
       

Kannada Duniya

100 ರೂ. ಕೊಡಿ ಎಷ್ಟು ಬೇಕೋ ಅಷ್ಟು ಪಾನಿಪುರಿ ತಿನ್ನಿ

mumbai_style_pani_puri

ಭಾರತದಲ್ಲಿ 4ಜಿ ಅನ್ ಲಿಮಿಟೆಡ್ ಇಂಟರ್ನೆಟ್ ಆಫರ್ ಮೂಲಕ ರಿಲಯೆನ್ಸ್ ಜಿಯೋ ಮನೆಮಾತಾಗಿತ್ತು. ಜಿಯೋ ಅನ್ ಲಿಮಿಟೆಡ್ ಪ್ಲಾನ್ ಕೇವಲ ಟೆಲಿಕಾಂ ಕ್ಷೇತ್ರದ ಮೇಲೆ ಮಾತ್ರವಲ್ಲ ಉಳಿದ ಉದ್ಯಮಗಳ ಮೇಲೂ ಸಾಕಷ್ಟು ಪ್ರಭಾವ ಬೀರಿದೆ. ಗುಜರಾತ್ ನ ಚಾಟ್ ವಾಲಾ ಒಬ್ಬ ಈಗ ಇದೇ ಪ್ಲಾನ್ ಮಾಡಿದ್ದಾನೆ.

ಹೆಚ್ಚು ಹಣ ಗಳಿಸೋಕೆ ಅವನು ಕಂಡುಕೊಂಡಿರೋದು ಅನ್ ಲಿಮಿಟೆಡ್ ಆಫರ್. ಈ ಪ್ಲಾನ್ ಸಖತ್ತಾಗಿ ವರ್ಕೌಟ್ ಕೂಡ ಆಗ್ತಿದೆ. ಫೋರ್ ಬಂದರ್ ಮೂಲದ ಪಾನಿಪುರಿ ವ್ಯಾಪಾರಿ ರವಿ ಜಗ್ದಂಬಾ ಎಂಬಾತ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದ್ದಾನೆ. ಎರಡು ಹೊಸ ಸ್ಕೀಮ್ ಗಳನ್ನು ತಂದಿದ್ದಾನೆ.

pani

100 ರೂಪಾಯಿ ಕೊಟ್ಟು ನೀವು ಎಷ್ಟು ಬೇಕಾದ್ರೂ ಪಾನಿಪುರಿ ತಿನ್ನಬಹುದು. ನಿಮಗೆ ಸಾಕು ಎನಿಸುವವರೆಗೂ ರವಿ, ಪಾನಿಪುರಿ ಕೊಡ್ತಾನೆ. ಇದು ಒಂದು ಸ್ಕೀಮ್ ಆದ್ರೆ, ಇನ್ನೊಂದು 1000 ರೂಪಾಯಿಯ ಆಫರ್. ತಿಂಗಳಿಗೆ ನೀವು 1000 ರೂಪಾಯಿ ಕೊಟ್ಟು ಎಷ್ಟು ಬೇಕೋ ಅಷ್ಟು ಪಾನಿಪುರಿ ತಿನ್ನಲು ಅವಕಾಶವಿದೆ. ಅಚ್ಚರಿ ಎಂಬಂತೆ ಈ ಎರಡೂ ಪ್ಲಾನ್ ಗಳಿಂದ ರವಿಗೆ ಸಖತ್ ಬ್ಯುಸಿನೆಸ್ ಆಗ್ತಿದ್ಯಂತೆ. ಭರ್ತಿ ಲಾಭ ಬರ್ತಿರೋದು ನೋಡಿ ರವಿ ಕೂಡ ಖುಷಿಯಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...