alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗಿಸುತ್ತೆ ಈ ಚಿನ್ನದ ಕಿವಿಯೋಲೆಯ ಬೆಲೆ..!

grt

ಚೆನ್ನೈ: ವಿವಿಧ ವಿನ್ಯಾಸದ ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಮುಖವಾಗಿರುವ ಚೆನ್ನೈನ ಜಿ.ಆರ್.ಟಿ. ಜ್ಯುವೆಲ್ಲರ್ಸ್ ಗಿನ್ನೆಸ್ ದಾಖಲೆಯ ಕಿವಿಯೋಲೆಯನ್ನು ಸಿದ್ಧಪಡಿಸಿದೆ.

ಪ್ರಮುಖ ಆಭರಣ ತಯಾರಿಕಾ ಕಂಪನಿಯಾಗಿರುವ ಜಿ.ಆರ್.ಟಿ. ಜ್ಯುವೆಲ್ಲರ್ಸ್ ಕಳೆದ ವರ್ಷ ದುಬೈನಲ್ಲಿ 1 ಕೆ.ಜಿ. ತೂಕದ ಚಿನ್ನದ ಕಿವಿಯೋಲೆಯನ್ನು ತಯಾರಿಸಿ ಗಮನ ಸೆಳೆದಿತ್ತು. ಈಗ 1,513 ಕೆ.ಜಿ. ತೂಕದ ಜುಮ್ಕಿಯನ್ನು ತಯಾರಿಸಿದೆ. ಚಿನ್ನದ ಮೇಲಿನ ಹೂಡಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ಜುಮ್ಕಿಯನ್ನು ರೆಡಿ ಮಾಡಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ಜಿ.ಆರ್. ಆನಂದ್ ಅನಂತ ಪದ್ಮನಾಭನ್ ತಿಳಿಸಿದ್ದಾರೆ.

22 ಕ್ಯಾರೆಟ್ ಚಿನ್ನದಿಂದ ತಯಾರಿಸಿರುವ 1,513 ಕೆ.ಜಿ ತೂಕದ ಈ ಜುಮ್ಕಿಗೆ 45 ಲಕ್ಷ ರೂ. ಬೆಲೆ ಇದ್ದು, ಇದು ಗಿನ್ನೆಸ್ ದಾಖಲೆಗೆ ಸೇರಿದೆ. ಇದಕ್ಕೆ ಆನಂದ್ ಅನಂತ ಪದ್ಮನಾಭನ್ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...