alex Certify
ಕನ್ನಡ ದುನಿಯಾ       Mobile App
       

Kannada Duniya

GST -ಯಾವುದಕ್ಕೆ ತೆರಿಗೆ, ಯಾವುದಕ್ಕೆ ಇಲ್ಲ ಗೊತ್ತಾ..?

st-gst

ಸರಕು ಮತ್ತು ಸೇವಾ(ಜಿ.ಎಸ್.ಟಿ.) ಜುಲೈ 1 ರಿಂದ ಜಾರಿಗೆ ಬರಲಿದ್ದು, ಇದರ ಅಡಿಯಲ್ಲಿ ಯಾವುದಕ್ಕೆ ಎಷ್ಟು ತೆರಿಗೆ ಮತ್ತು ಯಾವುದಕ್ಕೆ ಇಲ್ಲ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಸೇವೆಗಳು:

1,000 ರೂ.ಗಿಂತ ಕಡಿಮೆ ದರದ ಹೋಟೆಲ್ ಮತ್ತು ಲಾಡ್ಜ್ ಸೇವೆಗೆ ಜಿ.ಎಸ್.ಟಿ. ತೆರಿಗೆ ಇಲ್ಲ. ಅದೇ ರೀತಿ ಶೇ. 5 ರಷ್ಟು ತೆರಿಗೆಯನ್ನು ಸಾರಿಗೆ ಸೇವೆ, ಸಣ್ಣ ರೆಸ್ಟೋರೆಂಟ್ ಗಳಲ್ಲಿ ಪಾವತಿಸಬೇಕಿದೆ. ಶೇ. 12 ರಷ್ಟು ಸೇವಾ ತೆರಿಗೆಯನ್ನು ಎ.ಸಿ. ರಹಿತ ಹೋಟೆಲ್, ಬಿಸಿನೆಸ್ ಕ್ಲಾಸ್ ವಿಮಾನ ಟಿಕೆಟ್ ಮೊದಲಾದವುಗಳಿಗೆ ವಿಧಿಸಲಾಗುತ್ತದೆ.

ಮದ್ಯ ಸರಬರಾಜು ಮಾಡುವ ಎ.ಸಿ. ಹೋಟೆಲ್, ದೂರ ಸಂಪರ್ಕ ಸೇವೆ, ಮಾಹಿತಿ ತಂತ್ರಜ್ಞಾನ, ಬ್ರಾಂಡೆಡ್ ಗಾರ್ಮೆಂಟ್ಸ್, ಹಣಕಾಸು ಸೇವೆಗಳಿಗೆ ಶೇ. 18 ರಷ್ಟು ತೆರಿಗೆ ಪಾವತಿಸಬೇಕಿದೆ.

ಇನ್ನು ಶೇ. 28 ರಷ್ಟು ತೆರಿಗೆಯನ್ನು ಪಂಚತಾರಾ ಹೋಟೆಲ್, ರೇಸ್ ಕ್ಲಬ್ ಬೆಟ್ಟಿಂಗ್, ಸಿನಿಮಾಗೆ ಜಿ.ಎಸ್.ಟಿ. ಅಡಿ ತೆರಿಗೆ ಹಾಕಲಾಗುತ್ತದೆ.

ಸರಕುಗಳು:

ಇನ್ನು ಸರಕುಗಳಾದ ಹಾಲು, ಬ್ರೆಡ್, ಬೆಣ್ಣೆ, ಮೊಟ್ಟೆ, ಮಜ್ಜಿಗೆ, ಮೊಸರು, ಮೀನು, ತಾಜಾ ಮಾಂಸ, ಜೇನುತುಪ್ಪ, ಕೋಳಿ ಮಾಂಸ, ತರಕಾರಿ, ಉಪ್ಪು, ಬಿಂದಿ, ದಿನಪತ್ರಿಕೆ ತಾಜಾ ಹಣ್ಣು ಮೊದಲಾದವುಗಳಿಗೆ ಜಿ.ಎಸ್.ಟಿ. ತೆರಿಗೆ ಇರುವುದಿಲ್ಲ.

ಶೇ. 5 ರಷ್ಟು ತೆರಿಗೆಯನ್ನು ಸಿದ್ಧಪಡಿಸಿದ ಆಹಾರ ಪದಾರ್ಥ, 500 ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆ, 1000 ರೂ.ಗಿಂತ ಕಡಿಮೆ ಬೆಲೆಯ ಬಟ್ಟೆ, ಹಾಲಿನ ಪುಡಿ, ಕಾಫಿ, ಟೀ, ಮಸಾಲಾ ಪದಾರ್ಥಗಳು, ಪಿಜ್ಜಾ, ಸೀಮೆಎಣ್ಣೆ, ಕಲ್ಲಿದ್ದಲು, ಔಷಧ, ಸ್ಟೆಂಟ್, ಶೀಥಲೀಕರಿಸಿದ ತರಕಾರಿಗೆ ವಿಧಿಸಲಾಗುವುದು.

ಶೇ. 12 ರಷ್ಟು ತೆರಿಗೆಯನ್ನು 1000 ರೂ.ಗಳಿಗಿಂತ ಹೆಚ್ಚಿನ ಮೊತ್ತದ ಬಟ್ಟೆ, ಚೀಸ್, ತುಪ್ಪ, ಪ್ಯಾಕೇಜ್ಡ್ ಡ್ರೈ ಫ್ರೂಟ್ಸ್, ಕುರುಕಲು ತಿಂಡಿ, ಆಯುರ್ವೇದ ಔಷಧ, ಟೂತ್ ಪೌಡರ್, ಛತ್ರಿ, ಹೊಲಿಗೆ ಯಂತ್ರ, ಅಗರಬತ್ತಿ, ಸೆಲ್ ಫೋನ್ ಮೊದಲಾವುಗಳಿಗೆ ಪಾವತಿಸಬೇಕಿದೆ.

ಶೇ. 18 ರಷ್ಟು ತೆರಿಗೆಯನ್ನು ಸರಕುಗಳಾದ 500 ರೂ. ಗಿಂತ ಹೆಚ್ಚಿನ ಬೆಲೆಯ ಪಾದರಕ್ಷೆ, ಬಿಸ್ಕತ್ ಗಳು, ಜಾಮ್, ಸಂಸ್ಕರಿತ ಸಕ್ಕರೆ, ಮಾನಿಟರ್, ಕ್ಯಾಮೆರಾ, ಸ್ಪೀಕರ್, ಮಿನರಲ್ ವಾಟರ್, ನೋಟ್ ಬುಕ್ ಮೊದಲಾದವುಗಳಿಗೆ ಪಾವತಿಸಬೇಕಿದೆ.

ಇನ್ನು ಶೇ. 28 ರಷ್ಟು ತೆರಿಗೆಯನ್ನು ಬೀಡಿ, ಕೋಕಾ ರಹಿತ ಚಾಕೊಲೇಟ್, ಪಾನ್ ಮಸಾಲ, ಶೇವಿಂಗ್ ಕ್ರೀಮ್, ಪೇಂಟ್, ಡಿಯೋಡ್ರಂಟ್, ಸೆರಾಮಿಕ್ ಟೈಲ್ಸ್, ವಾಟರ್ ಹೀಟರ್, ಹೇರ್ ಕ್ಲಿಪ್ಸ್, ಮೋಟಾರ್ ಸೈಕಲ್, ವೆಂಡಿಂಗ್ ಮೆಶೀನ್, ವಾಕ್ಯೂಮ್ ಕ್ಲೀನರ್ ಮೊದಲಾದವುಗಳಿಗೆ ಪಾವತಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...