alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಖರೀದಿಸುವವರಿಗೆ ಇಲ್ಲಿದೆ ನೆಮ್ಮದಿ ನೀಡುವ ಸುದ್ದಿ

ನವದೆಹಲಿ: ಹಳೆ ಕಾರು ಖರೀದಿಸಲು ಮುಂದಾದವರಿಗೆ ಗುಡ್ ನ್ಯೂಸ್ ಇಲ್ಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಎಸ್.ಟಿ. ಮಂಡಳಿಯ 25 ನೇ ಸಭೆಯಲ್ಲಿ 29 ಕರಕುಶಲ ವಸ್ತುಗಳ ತೆರಿಗೆಯನ್ನು ರದ್ದುಪಡಿಸಲಾಗಿದೆ.

ಇದರೊಂದಿಗೆ ಹಳೆ ಕಾರು, ನೀರಾವರಿ ಉಪಕರಣ ಮೊದಲಾದ 28 ಸರಕುಗಳು ಮತ್ತು 53 ಸೇವೆಗಳ ಮೇಲಿನ ಜಿ.ಎಸ್.ಟಿ. ಇಳಿಕೆ ಮಾಡಲಾಗಿದೆ. ಹಳೆ ಕಾರುಗಳು, ಜೈವಿಕ ಇಂಧನದಲ್ಲಿ ಸಂಚರಿಸುವ ಸಾರ್ವಜನಿಕ ಸಾರಿಗೆ ಬಸ್ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಕೆ ಮಾಡಲಾಗಿದೆ.

ಮಿಠಾಯಿ, 20 ಲೀಟರ್ ಕುಡಿಯುವ ನೀರಿನ ಬಾಟಲ್, ಹನಿ ನೀರಾವರಿ, ಯಾಂತ್ರಿಕ ಸ್ಪ್ರೇಯರ್, ಜೈವಿಕ ಕೀಟನಾಶಗಳ ಮೇಲಿನ ತೆರಿಗೆಯನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಸಲಾಗಿದೆ.

ವಿಭೂತಿ, ಶ್ರವಣ ಸಾಧನಗಳಿಗೆ ಶೂನ್ಯ ತೆರಿಗೆ ಇದ್ದರೆ, ಖಾಸಗಿ ವಿತರಕರ ಗೃಹೋಪಯೋಗಿ ಎಲ್.ಪಿ.ಜಿ., ಮೆಹಂದಿಗೆ ಶೇ. 18 ರಿಂದ ಶೇ. 5 ಕ್ಕೆ ತೆರಿಗೆ ಕಡಿಮೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...