alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಣ್ಣೆದೋಸೆ, ಇಡ್ಲಿ ಪ್ರಿಯರಿಗೆ ಸಂತಸದ ಸುದ್ದಿ

idly

ನವದೆಹಲಿ: ಬ್ರಾಂಡೆಡ್ ಆಹಾರ ವಸ್ತುಗಳಿಗೆ ಶೇ. 5 ರಷ್ಟು ಜಿ.ಎಸ್.ಟಿ. ತೆರಿಗೆ ಇದೆ. ಬ್ರ್ಯಾಂಡ್ ರಹಿತ ಆಹಾರಗಳ ಮೇಲೆ ಯಾವುದೇ ತೆರಿಗೆ ಇಲ್ಲವಾದ್ದರಿಂದ ಅನೇಕರು ಉದ್ದಿಮೆ ಬ್ರ್ಯಾಂಡ್ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.

ಈ ಹಿನ್ನಲೆಯಲ್ಲಿ 10 ಕ್ಕೂ ಅಧಿಕ ಪದಾರ್ಥಗಳ ಮೇಲಿನ ತೆರಿಗೆ ದರವನ್ನು ಇಳಿಸಲು ಜಿ.ಎಸ್.ಟಿ. ಮಂಡಳಿ ಯೋಜಿಸಿದೆ. ಇದರಿಂದ ನಿತ್ಯ ಬಳಕೆಯ ಬೆಣ್ಣೆ ದೋಸೆ, ಇಡ್ಲಿ, ಕಸ್ಟರ್ಡ್ ಪೌಡರ್ ಮೊದಲಾದ ಅಡುಗೆ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ. ಕಡಿಮೆಯಾಗಲಿದೆ.

ಅಡುಗೆ ಮನೆ ಪದಾರ್ಥಗಳ ಮೇಲಿನ ಜಿ.ಎಸ್.ಟಿ. ದರ ತಗ್ಗಿಸಲು ತೆರಿಗೆ ಮಂಡಳಿ ಚಿಂತಿಸಿರುವ ಹಿನ್ನಲೆಯಲ್ಲಿ ಬೆಣ್ಣೆ ದೋಸೆ, ಇಡ್ಲಿ ದರ ಇಳಿಕೆಯಾಗಲಿದೆ.

ಸೆಪ್ಟಂಬರ್ 9 ರಂದು ಹೈದರಾಬಾದ್ ನಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಜಿ.ಎಸ್.ಟಿ. ಮಂಡಳಿ ಸಭೆ ನಡೆಯಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...