alex Certify
ಕನ್ನಡ ದುನಿಯಾ       Mobile App
       

Kannada Duniya

GST ಎಫೆಕ್ಟ್ ನಿಂದ ಕಹಿಯಾಗಿದೆ ‘ಸಿಹಿ’

gst-wb-df

ಕೋಲ್ಕತ್ತಾ: ಸರಕು ಮತ್ತು ಸೇವಾ ತೆರಿಗೆಯಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವ ಪಶ್ಚಿಮ ಬಂಗಾಳದ ಸಿಹಿ ತಿನಿಸು ಮಾರಾಟಗಾರರು ಬಂದ್ ಗೆ ಕರೆ ನೀಡಿದ್ದಾರೆ.

ಸಿಹಿ ತಿನಿಸು ತಯಾರಕರು ಮತ್ತು ಮಾರಾಟಗಾರರು ಆಗಸ್ಟ್ 21 ರಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದು, ತೆರಿಗೆಯನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿ.ಎಸ್.ಟಿ. ಜಾರಿಗೆ ಬಂದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಸಿಹಿ ತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಹು ಬೇಗನೆ ಹಾಳಾಗುವಂತಹ ಕೆಲವು ಪದಾರ್ಥಗಳಿಗೂ ಶೇ. 5 ರಷ್ಟು ಜಿ.ಎಸ್.ಟಿ. ವಿಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಸಿಹಿ ತಿನಿಸು ಮಾರಾಟಗಾರರ ಸಂಘದ ಅಧ್ಯಕ್ಷ ರಬೀಂದ್ರ ಕುಮಾರ್ ಪಾಲ್, ಬಹುತೇಕ ಸಿಹಿತಿನಿಸುಗಳನ್ನು ಕಡಲೆ ಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಅವು ಬೇಗನೆ ಹಾಳಾಗುವುದರಿಂದ ನಷ್ಟವಾಗುತ್ತಿದೆ. ಜಿ.ಎಸ್.ಟಿ.ಯಿಂದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಬಹುತೇಕ ಸಿಹಿತಿನಿಸುಗಳು ಬೇಗನೆ ಹಾಳಾಗುತ್ತವೆ. ಇಂತಹ ತಿನಿಸುಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬಾರದೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಿಹಿ ತಿಂಡಿಗಳ ಮೇಲೆ ವ್ಯಾಟ್ ಹಾಕಿದ್ದರು. ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಹಿಂಪಡೆಯಲಾಗಿತ್ತು. ಈಗ ಮತ್ತೆ ಸಿಹಿ ತಿನಿಸುಗಳ ಮೇಲೆ ಹಾಕಿರುವ ತೆರಿಗೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಆಗಸ್ಟ್ 21 ರಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಅಂದು ಪಶ್ಚಿಮ ಬಂಗಾಳದಲ್ಲಿ ರಾಜ್ಯವ್ಯಾಪಿ ಸಿಹಿತಿನಿಸುಗಳು ಸಿಗುವುದಿಲ್ಲ. ಬಂದ್ ಜೊತೆಗೆ ನಿರಂತರವಾಗಿ 3 ದಿನಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...