alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಸ್ತುಗಳನ್ನು ಜು.27 ರವರೆಗೆ ಖರೀದಿ ಮಾಡಬೇಡಿ

ವಾಷಿಂಗ್ ಮಶಿನ್, ಫ್ರಿಜ್, ಸ್ಯಾನೆಟರಿ ನ್ಯಾಪ್ಕಿನ್ ಸೇರಿದಂತೆ ಅನೇಕ ವಸ್ತುಗಳು ಬೆಲೆ ಶೀಘ್ರವೇ ಇಳಿಕೆಯಾಗಲಿದೆ. ಜಿಎಸ್ಟಿ ದರ ಇಳಿಕೆಯಾಗಿದ್ದು, ಜುಲೈ 27ರವರೆಗೆ ಈ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಹೇಳಿದ್ದಾರೆ.

ಯಾವ ವಸ್ತುಗಳ ಮೇಲೆ ಜಿಎಸ್ಟಿ ಇಳಿಕೆಯಾಗಿದೆಯೋ ಅದ್ರ ಹೊಸ ಬೆಲೆ ಜುಲೈ 27ರ ನಂತ್ರ ಜಾರಿಗೆ ಬರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ಸುಶೀಲ್ ಮೋದಿ, ಅಗತ್ಯವಿಲ್ಲದಿದ್ದರೆ 27ರ ನಂತ್ರ ವಸ್ತುಗಳನ್ನು ಖರೀದಿ ಮಾಡಿ. 27ರ ನಂತ್ರ ವಸ್ತುಗಳನ್ನು ಖರೀದಿ ಮಾಡಿದ್ರೆ ಜಿಎಸ್ಟಿ ಲಾಭ ಸಿಗಲಿದೆ ಎಂದು ಹೇಳಿದ್ದಾರೆ.

ಶನಿವಾರ ಜಿಎಸ್ಟಿ ಸಭೆ ನಂತ್ರ ದೇಶಿಯ ಬಳಕೆಯ 17 ವಸ್ತುಗಳನ್ನು ಜಿಎಸ್ಟಿ ಶೇಕಡಾ 28ರ ಮಟ್ಟದಿಂದ ಕೆಳಗೆ ತರಲಾಗಿದೆ. ತೆರಿಗೆ ಇಳಿಕೆ ಮಾಡಿದ ಸಾಮಗ್ರಿಗಳಲ್ಲಿ ವಾಷಿಂಗ್ ಮೆಷಿನ್, ಫ್ರಿಜ್, ಟಿವಿ (ಕೇವಲ 25 ಇಂಚುಗಳು), ವಿಡಿಯೋ ಆಟಗಳು, ಬ್ಲೆಂಡರ್, ಸ್ಯಾನಿಟರಿ ನ್ಯಾಪ್ಕಿನ್ ಸೇರಿದೆ. ಜುಲೈ 27ರ ನಂತ್ರ ಈ ಎಲ್ಲ ವಸ್ತುಗಳು ಶೇಕಡಾ 18 ರ ಜಿಎಸ್ಟಿ ದರದಲ್ಲಿ ಸಿಗಲಿವೆ. ತಜ್ಞರ ಪ್ರಕಾರ ಜಿಎಸ್ಟಿ ಇಳಿಕೆ ನಂತ್ರ ಈ ಎಲ್ಲ ವಸ್ತುಗಳ ಬೆಲೆ ಶೇಕಡಾ 10ರಷ್ಟು ಕಡಿಮೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...