alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಶೀಘ್ರದಲ್ಲೇ ಇನ್ನಷ್ಟು ವಸ್ತುಗಳ ಜಿಎಸ್‌ಟಿ ಕಡಿತ

ಇನ್ನಷ್ಟು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸುವುದರಿಂದ ಮಾರಾಟ ಹೆಚ್ಚಾಗಿ, ಆದಾಯವೂ ಹೆಚ್ಚಾಗುತ್ತದೆ. ಹೀಗಾದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆ ಕಾಣಲು ಸಾಧ್ಯ ಎಂದು ಆರ್ಥಿಕ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಅನುಮೋದನೆ ಪಡೆಯುವ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ವಸ್ತುಗಳ ಬೆಲೆ ಕಡಿತಗೊಳಿಸುವ ನಿರ್ಧಾರ ಹಿಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. 384 ವಸ್ತುಗಳು ಹಾಗೂ 68 ಸೇವೆಗಳಲ್ಲಿನ ಜಿಎಸ್‌ಟಿ ದರವನ್ನು ಇಳಿಕೆ ಮಾಡಲಾಗಿದೆ. 186 ವಸ್ತುಗಳು ಹಾಗೂ 99 ಸೇವೆಗಳನ್ನು ಜಿಎಸ್‌ಟಿನಿಂದ ಹೊರಗಿಡಲಾಗಿದೆ. ಪ್ರಮುಖವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಇದ್ದ ಜಿಎಸ್‌ಟಿಯನ್ನು ಕೈಬಿಡಲಾಗಿದೆ ಎಂದು ವಿವರಿಸಿದರು.

ಜಿಎಸ್‌ಟಿ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಲೋಕಸಭೆ ಬಾವಿಗಳಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ವಿಶ್ವ, ಭಾರತದತ್ತ ಮುಖ ಮಾಡಿದೆ. ದೇಶದ ಆರ್ಥಿಕತೆ 2020 ರ ವೇಳೆಗೆ ಶೇ.7.5 ರಷ್ಟು ಏರಿಕೆಯಾಗಲಿದೆ ಎಂಬ ವರದಿಯೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಭಾರತ ಮತ್ತೊಮ್ಮೆ ಚಿನ್ನದ ಹಕ್ಕಿಯಾಗಿ ಹಾರಲಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.

ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಜನರು ನಿಮ್ಮ ಪಕ್ಷವನ್ನು ಎಂದಿಗೂ ಕ್ಷಮಿಸರು. ಅತಿ ಹೆಚ್ಚು ತೆರಿಗೆಗಳನ್ನು ಪಾವತಿಸಿದ್ದಾರೆ. ಇನ್ನೂ ನಿಮಗೆ ಅದೇ ಬೇಕಾಗಿದೆ. ಅದಕ್ಕೇ ಸಭೆ ನಡೆಯಲು ಬಿಡುತ್ತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ರಾಷ್ಟ್ರೀಯ ಭದ್ರತೆ ಸೇರಿದಂತೆ ಕಾಂಗ್ರೆಸ್‌ನ ಅನೇಕ ಆಡಳಿತ ವೈಖರಿಯನ್ನು ಉಲ್ಲೇಖಿಸಿ ಗೋಯಲ್‌, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...