alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ತಿಂಗಳು ಸಂಗ್ರಹವಾಗಲಿರುವ GST ಎಷ್ಟು ಗೊತ್ತಾ?

ಕಳೆದ ವರ್ಷದ ಜುಲೈನಲ್ಲಿ ಜಿ.ಎಸ್.ಟಿ. ಜಾರಿಗೊಂಡ ಬಳಿಕ ತೆರಿಗೆ ಸಂಗ್ರಹದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಜಾರಿಗೊಂಡ ಮೊದಲ ತಿಂಗಳು 95 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದರೆ, ಆಗಸ್ಟ್ ನಲ್ಲಿ 91 ಸಾವಿರ ಕೋಟಿ ರೂ.,ಸೆಪ್ಟೆಂಬರ್ ನಲ್ಲಿ 92,150 ಕೋಟಿ ರೂ., ಅಕ್ಟೋಬರ್ 83 ಸಾವಿರ ಕೋಟಿ ರೂ., ನವೆಂಬರ್ ನಲ್ಲಿ 80,808 ಕೋಟಿ ರೂ. ಹಾಗೂ ಡಿಸೆಂಬರ್ ನಲ್ಲಿ 86,703 ಕೋಟಿ ರೂ. ಸಂಗ್ರಹವಾಗಿತ್ತು.

ಕೆಲ ವಸ್ತುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿತಗೊಳಿಸಿದ ಪರಿಣಾಮ ಜಿ.ಎಸ್.ಟಿ. ಸಂಗ್ರಹದಲ್ಲಿ ಇಳಿಮುಖವಾಗಿದ್ದರೂ ಬಜೆಟ್ ಮಂಡನೆ ನಂತರ ಜಿ.ಎಸ್.ಟಿ. ರಿಟರ್ನ್ಸ್ ದಾಖಲಿಸುವ ವ್ಯವಸ್ಥೆ ಸ್ಥಿರಗೊಳ್ಳುತ್ತಿದ್ದು, ಪ್ರತಿ ತಿಂಗಳು ಒಂದು ಲಕ್ಷ ಕೋಟಿ ರೂ. ಗೂ ಅಧಿಕ ಜಿ.ಎಸ್.ಟಿ. ಸಂಗ್ರಹವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿ.ಎಸ್.ಟಿ. ಯಿಂದ ಅಂದಾಜು 7.44 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದು ಸರ್ಕಾರ ಬಜೆಟ್ ನಲ್ಲಿ ಅಂದಾಜು ಮಾಡಿದ್ದು, ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗುವ ಕಾರಣ ತೆರಿಗೆ ಸಂಗ್ರಹದಲ್ಲಿಯೂ ಹೆಚ್ಚಳವಾಗಬಹುದೆನ್ನುವ ನಿರೀಕ್ಷೆ ಹೊಂದಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...