alex Certify
ಕನ್ನಡ ದುನಿಯಾ       Mobile App
       

Kannada Duniya

GST: ಕೃಷಿಕರಿಗೆ ಇಲ್ಲಿದೆ ಗುಡ್ ನ್ಯೂಸ್….

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ಜನವರಿ 18 ರಂದು ನಡೆಯಲಿದೆ. ನವೆಂಬರ್ 10 ರಂದು ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ 175 ಕ್ಕೂ ಅಧಿಕ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಾಗಿತ್ತು.

ಅಲ್ಲದೇ, ಶೇ. 28 ರಷ್ಟು ತೆರಿಗೆ ಶ್ರೇಣಿಯಲ್ಲಿದ್ದ ಬಹುತೇಕ ಉತ್ಪನ್ನಗಳ ಮೇಲೆ ಇದ್ದ ತೆರಿಗೆ ಇಳಿಕೆ ಮಾಡಿ ಶೇ. 18 ರ ಸ್ಲ್ಯಾಬ್ ಗೆ ತರಲಾಗಿದೆ.

ಜನವರಿ 18 ರಂದು ನಡೆಯಲಿರುವ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಕೃಷಿ ಸಲಕರಣೆ, ಸಣ್ಣ ನೀರಾವರಿ ಸಲಕರಣೆ, ಎಲೆಕ್ಟ್ರಿಕ್ ವಾಹನಗಳು ಸೇರಿ ವಿವಿಧ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ.ಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಸದ್ಯ ಸಣ್ಣ ನೀರಾವರಿಯ ಪರಿಕರಗಳಿಗೆ ಶೇ. 18 ರಷ್ಟು ಜಿ.ಎಸ್.ಟಿ. ಇದೆ. ಇದನ್ನು ಶೇ. 12 ಕ್ಕೆ ಇಳಿಸುವ ಸಾಧ್ಯತೆ ಇದೆ. ಬಯೋ ಡೀಸೆಲ್ ವಾಹನ, ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಬಹುದಾಗಿದೆ.

ಕೃಷಿ ಮತ್ತು ಬಯೋ ಡೀಸೆಲ್ ಗೆ ಪೂರಕವಾಗಿ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದು, ಕೃಷಿ ಸಲಕರಣೆ, ಇ –ವಾಹನಗಳ ಜಿ.ಎಸ್.ಟಿ. ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...