alex Certify
ಕನ್ನಡ ದುನಿಯಾ       Mobile App
       

Kannada Duniya

GST: ಗ್ರಾಹಕರಿಗೆ ಮತ್ತೊಮ್ಮೆ ಸಿಗಲಿದೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿಯ ಸಭೆ ಜನವರಿ 18 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಜಿ.ಎಸ್.ಟಿ. ರಿಟರ್ನ್ಸ್ ಸರಳೀಕರಣಕ್ಕೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಇದರೊಂದಿಗೆ 70-80 ಸರಕು ಮತ್ತು ಸೇವೆಗಳ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ.

ದರ ನಿಗದಿ ಸಮಿತಿಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ನಾಳೆ ನಡೆಯಲಿರುವ ಸಭೆಯಲ್ಲಿ ಸುಮಾರು 55 ಸೇವೆಗಳು, 25 ಸರಕುಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆ ಸರಳೀಕರಣದ ಬಗ್ಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಜಿ.ಎಸ್.ಟಿ.ಆರ್. -1, 2, 3 ಅರ್ಜಿಗಳನ್ನು ವಿಲೀನಗೊಳಿಸಿ ವಹಿವಾಟುದಾರರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ.

ನೀರಾವರಿ ಪರಿಕರ, ಸಲಕರಣೆಗಳ ಮೇಲಿನ ದರವನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಕೆ ಮಾಡಲಾಗುವುದು. ಇ –ವಾಹನ, ಎಲೆಕ್ಟ್ರಿಕ್ ಬಸ್, ಬಯೋ ಡೀಸೆಲ್ ಮೇಲಿನ ಜಿ.ಎಸ್.ಟಿ.ಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸುವ ಸಾಧ್ಯತೆ ಇದೆ.

ನೈಸರ್ಗಿಕ ಅನಿಲ, ವಿಮಾನ ಇಂಧನ ಮೊದಲಾದವುಗಳ ಬಗ್ಗೆಯೂ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...