alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಯ್ತು LPG ಸಿಲಿಂಡರ್

lpg1-621x414

ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ಸರಕು ಮತ್ತು ಸೇವಾ ತೆರಿಗೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಅದರಿಂದ ಜನಸಾಮಾನ್ಯರ ಮೇಲೆ ಮಿಶ್ರ ಪರಿಣಾಮ ಉಂಟಾಗ್ತಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದ್ರೆ, ಇನ್ನು ಕೆಲವು ದಿನ ಬಳಕೆಯ ಅತ್ಯವಶ್ಯ ವಸ್ತುಗಳು ದುಬಾರಿಯಾಗಿವೆ.

ಅಡುಗೆ ಅನಿಲ ಕೂಡ ಅವುಗಳಲ್ಲೊಂದು. ಜಿಎಸ್ಟಿ ಜಾರಿಯಿಂದಾಗಿ ಎಲ್ ಪಿ ಜಿ ಸಿಲಿಂಡರ್ ಗಳು ದುಬಾರಿಯಾಗಿವೆ. ಎಲ್ ಪಿ ಜಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 32 ರೂಪಾಯಿ ಏರಿಕೆಯಾಗಿದೆ.

ಎಲ್ ಪಿ ಜಿ ಸಿಲಿಂಡರ್ ಬೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರನಾಗಿ ಇರಲಿದೆ. ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಕೂಡ ಬದಲಾವಣೆ ಆಗಲಿದೆ. ಜಿಎಸ್ಟಿ ಜಾರಿಯಿಂದಾಗಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ 69 ರೂಪಾಯಿ ಇಳಿಕೆಯಾಗಿದೆ.

ಈ ಮೊದಲು ವಾಣಿಜ್ಯ ಎಲ್ ಪಿ ಜಿಗಳಿಗೆ ಶೇ.8ರಷ್ಟು ಅಬಕಾರಿ ಸುಂಕ ಹಾಗೂ ಶೇ.14.5ರಷ್ಟು ವ್ಯಾಟ್ ವಿಧಿಸಲಾಗುತ್ತಿತ್ತು. ಇವೆರಡನ್ನೂ ಒಟ್ಟುಗೂಡಿಸಿ ಶೇ.22.5ರಷ್ಟು ತೆರಿಗೆ ಕಟ್ಟಬೇಕಾಗುತ್ತಿತ್ತು. ಆದ್ರೆ ಈಗ ಜಿಎಸ್ಟಿಯಲ್ಲಿ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...