alex Certify
ಕನ್ನಡ ದುನಿಯಾ       Mobile App
       

Kannada Duniya

GSTಯಿಂದಾಗಿ ಈ ವರ್ಷ ಕಾದಿದೆ ಡಬಲ್ ಶಾಕ್..!

gst

ಹೊಸ ತೆರಿಗೆ ನೀತಿ ಮತ್ತು ಇನ್ಪುಟ್ ವೆಚ್ಚದಲ್ಲಿನ ಏರಿಕೆಯಿಂದ ಈ ಬಾರಿ ಜನಸಾಮಾನ್ಯರಿಗೆ ಶಾಕ್ ಕಾದಿದೆ. ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್ ಮಷಿನ್ ಗಳ ಬೆಲೆ ಈ ವರ್ಷ ಎರಡು ಬಾರಿ ಏರಿಕೆಯಾಗುವ ಸಾಧ್ಯತೆ ಇದೆ. ಜಿಎಸ್ಟಿಯಿಂದಾಗಿರುವ ಹೆಚ್ಚುವರಿ ತೆರಿಗೆ ಭಾರವನ್ನು ಭರಿಸಲು ವಿಡಿಯೋಕಾನ್, ಪೆನಾಸೊನಿಕ್, ಎಲ್ ಜಿ ಮತ್ತು ವರ್ಪೂಲ್ ತಮ್ಮ ಉತ್ಪನ್ನಗಳ ಬೆಲೆ ಏರಿಕೆಗೆ ಮುಂದಾಗಿವೆ.

ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿನ ಏರಿಕೆಯೂ ಇದಕ್ಕೆ ಕಾರಣ. ಕಳೆದ ಫೆಬ್ರವರಿಯಿಂದ್ಲೇ ಸ್ಟೀಲ್, ತಾಮ್ರ ಮತ್ತು ಪ್ಲಾಸ್ಟಿಕ್ ದರ ಹೆಚ್ಚಳವಾಗಿತ್ತು. ಬಿಡಿಭಾಗಗಳಾದ ಎಸಿ ಕಂಪ್ರೆಸ್ಸರ್ ಗಳು ಮತ್ತು ರೆಫ್ರಿಜರೇಟರ್ ಬೆಲೆ ಶೇ.4 ರಷ್ಟು ಏರಿಕೆಯಾಗಿದ್ದು, ಟಿವಿ ಪ್ಯಾನಲ್ ಗಳ ದರವೂ ಶೇ.3 ರಷ್ಟು ಹೆಚ್ಚಳವಾಗಿದೆ.

ಎಲ್ಲಾ ಕಂಪನಿಗಳು ಬೆಲೆ ಏರಿಕೆಯ ರೂಪುರೇಷೆಯನ್ನು ಸಿದ್ಧಪಡಿಸುತ್ತಿವೆ. ವಿಡಿಯೋಕಾನ್ ತನ್ನ ಉತ್ಪನ್ನಗಳ ದರವನ್ನು ಶೇ.2.5 ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿದೆ. ಹಬ್ಬಗಳ ಸೀಸನ್ ಮುಗಿದ ಮೇಲೆ ದರ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...