alex Certify
ಕನ್ನಡ ದುನಿಯಾ       Mobile App
       

Kannada Duniya

ಏರಿಕೆಯಾಗಲಿದೆ ವಿಮೆ ಕಂತು, ಬ್ಯಾಂಕ್ ಶುಲ್ಕ

gst-vime

ನವದೆಹಲಿ: ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾಗಲಿದ್ದು, ಈಗಾಗಲೇ ಹಲವು ಸರಕು ಮತ್ತು ಸೇವೆಗಳ ತೆರಿಗೆಯನ್ನು ನಿಗದಿ ಮಾಡಲಾಗಿದೆ.

ಜಿ.ಎಸ್.ಟಿ. ಪರಿಣಾಮದಿಂದಾಗಿ ಜುಲೈನಿಂದ ಬ್ಯಾಂಕಿಂಗ್ ಶುಲ್ಕಗಳು, ವಿಮೆಯ ಕಂತುಗಳು ಏರಿಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಬ್ಯಾಂಕ್, ವಿಮೆ, ರಿಯಲ್ ಎಸ್ಟೇಟ್ ಹಾಗೂ ಮ್ಯೂಚುವಲ್ ಫಂಡ್ ಗಳಿಗೆ ಶೇ. 15 ರಷ್ಟು ತೆರಿಗೆ ಇದೆ.

ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಇದು ಶೇ 18 ರಷ್ಟು ಏರಿಕೆಯಾಗಲಿದ್ದು, ಇದು ಗ್ರಾಹಕರಿಗೆ ವರ್ಗಾವಣೆಯಾಗಲಿದೆ. ಹೀಗಾಗಿ ಈ ಸೇವೆಗಳೆಲ್ಲಾ ದುಬಾರಿಯಾಗಬಹುದೆಂದು ಹೇಳಲಾಗಿದೆ.

ಹಣಕಾಸು ಸೇವೆಗಳಿಗೆ ಶೇ. 18 ರಷ್ಟು ಜಿ.ಎಸ್.ಟಿ. ನಿಗದಿ ಮಾಡಲಾಗಿದೆ. ವಾಹನ ವಿಮೆ, ಆರೋಗ್ಯ ವಿಮೆ, ಅವಧಿ ವಿಮೆ ಕಂತು ಮೊದಲಾದವುಗಳ ಮೇಲೆ ಈಗಿರುವ 15 ರಷ್ಟು ತೆರಿಗೆ ಬದಲಿಗೆ ಶೇ. 18 ರಷ್ಟು ತೆರಿಗೆ ಏರಿಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...