alex Certify
ಕನ್ನಡ ದುನಿಯಾ       Mobile App
       

Kannada Duniya

ಅಗ್ಗದ ಮನೆ ಖರೀದಿಸುವವರಿಗೆ ‘ಗುಡ್’ ನ್ಯೂಸ್

ನವದೆಹಲಿ: ಅಗ್ಗದ ಮನೆಗಳ ನಿರ್ಮಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ(GST) ಮಂಡಳಿ ಸಭೆಯಲ್ಲಿ ನಿರ್ಮಾಣ ಹಂತದ ಮನೆಗಳಿಗೆ ವಿಧಿಸಲಾಗುವ ಶೇ. 12 ರ ಜಿ.ಎಸ್.ಟಿ.ಯನ್ನು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ನಿರ್ಮಾಣವಾಗುವ ಮನೆಗಳಿಗೂ ವಿಸ್ತರಿಸಲಾಗಿದೆ.

ಇದರೊಂದಿಗೆ ಕೇಂದ್ರ ಸರ್ಕಾರ ಅಗ್ಗದ ದರದ ವಸತಿ ಯೋಜನೆಗಳಲ್ಲಿ ಗ್ರಾಹಕರಿಂದ ಜಿ.ಎಸ್.ಟಿ. ವಸೂಲಿ ಮಾಡದಂತೆ ಬಿಲ್ಡರ್ ಗಳಿಗೆ ಸೂಚಿಸಿದೆ. ವಸತಿ ಯೋಜನೆಗಳಲ್ಲಿ ಶೇ. 8 ರಷ್ಟು ಜಿ.ಎಸ್.ಟಿ. ದರ ಅನ್ವಯವಾಗಲಿದೆ. ಇದನ್ನು ಬಿಲ್ಡರ್ ಗಳು ಇನ್ ಪುಟ್ ಕ್ರೆಡಿಟ್ ಮೂಲಕ ಪಡೆಯಬಹುದಾಗಿದೆ. ಜಿ.ಎಸ್.ಟಿ. ಶುಲ್ಕವನ್ನು ವಿಧಿಸದೇ, ಅಪಾರ್ಟ್ ಮೆಂಟ್ ಶುಲ್ಕಗಳನ್ನು ಇಳಿಕೆ ಮಾಡಿದಲ್ಲಿ ಮಾತ್ರ ಇನ್ ಪುಟ್ ಕ್ರೆಡಿಟ್ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಜನವರಿ 25 ರಿಂದ ಈ ನಿಯಮ ಜಾರಿಗೆ ಬಂದಿದೆ. ಮನೆಗಳು, ಫ್ಲ್ಯಾಟ್ ನಿರ್ಮಾಣ ವೆಚ್ಚದ 1/3 ಮೊತ್ತ ಪಾವತಿಸಿದ ಬಳಿಕ ಜಿ.ಎಸ್.ಟಿ. ದರ ಶೇ. 8 ಕ್ಕೆ ಇಳಿಕೆಯಾಗಲಿದೆ. ನಿರ್ಮಾಣಕ್ಕೆ ಬಳಸುವ ಪ್ರಮುಖವಾದ ಸರಕುಗಳಿಗೆ ಶೇ. 18 ರಷ್ಟು, ಶೇ. 28 ರಷ್ಟು ಜಿ.ಎಸ್.ಟಿ. ಇದೆ. ಅಗ್ಗದ ವಸತಿ ಯೋಜನೆಗಳಲ್ಲಿ ಶೇ. 8 ರಷ್ಟು ಜಿ.ಎಸ್.ಟಿ. ಅನ್ವಯಿಸಲಿದ್ದು, ಬಿಲ್ಡರ್ ಗಳು ಅದನ್ನು ಇನ್ ಪುಟ್ ಕ್ರೆಡಿಟ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...