alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ ಗೂ ಮೊದಲೇ ‘ಸಿಹಿ ಸುದ್ದಿ’ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಇದೇ ವೇಳೆ ಮನೆ ಖರೀದಿಸಲು ಮುಂದಾದವರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಕೇಂದ್ರ ಬಜೆಟ್ ಮಂಡನೆಗೆ ಕೆಲವು ದಿನ ಬಾಕಿ ಉಳಿದಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(PMAY)ಯ ಸಾಲ ಸಬ್ಸಿಡಿ ಯೋಜನೆ(CLSS) ಮನೆ ಖರೀದಿಸುವವರ ಸರಕು ಮತ್ತು ಸೇವಾ ತೆರಿಗೆ(GST) ದರವನ್ನು ಶೇ. 12 ರಿಂದ ಶೇ. 8 ಕ್ಕೆ ಇಳಿಸಲಾಗಿದ್ದು, ಜನವರಿ 25 ರಿಂದಲೇ ಇದು ಜಾರಿಯಾಗಿದೆ.

ಇನ್ನು CLSS ಯೋಜನೆಯಡಿ ಮನೆ ಖರೀದಿ ಮಾಡುವವರು ಶೇ. 8 ರಷ್ಟು ಜಿ.ಎಸ್.ಟಿ. ನೀಡಬಹುದು. ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ, CLSS ಅಡಿ ಖರೀದಿಸಿದ ಮನೆಗಳಿಗೆ ಅನ್ವಯವಾಗುತ್ತದೆ.

ದುರ್ಬಲ ವರ್ಗದವರು(EWS), ಕಡಿಮೆ ಆದಾಯ ಇರುವ ಸಮೂಹ(LIG), ಮಧ್ಯಮ ಆದಾಯ ಸಮೂಹ(MIG -1), ಮಧ್ಯಮ ಆದಾಯ ಸಮೂಹ -2(MIG -2) ವರ್ಗದವರಿಗೆ ಈ ಜಿ.ಎಸ್.ಟಿ. ದರ ಇಳಿಕೆ ಅನ್ವಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...