alex Certify
ಕನ್ನಡ ದುನಿಯಾ       Mobile App
       

Kannada Duniya

GST ಎಫೆಕ್ಟ್: ದುಬಾರಿಯಾಯ್ತು ಆರೋಗ್ಯ ಸೇವೆ

gst-health-d

ನವದೆಹಲಿ: ಜಿ.ಎಸ್.ಟಿ. ಯಿಂದಾಗಿ ಕೆಲವು ಆರೋಗ್ಯ ಸೇವೆಗಳು ತುಟ್ಟಿಯಾಗಿದ್ದು, ಡಯಾಲಿಸಿಸ್, ಕ್ಯಾನ್ಸರ್ ನಂತಹ ಚಿಕಿತ್ಸಾ ವೆಚ್ಚ ದುಬಾರಿಯಾಗಿವೆ.

ಡಯಾಲಿಸಿಸ್, ಪೇಸ್ ಮೇಕರ್ ಜೋಡಣೆ, ಮೂಳೆ ಚಿಕಿತ್ಸೆಯಲ್ಲಿ ಬಳಸುವ ಕೆಲವು ಸಾಧನಗಳು ಮತ್ತು ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಲಿವೆ.

ಜೀವ ರಕ್ಷಕ ಔಷಧಗಳು, ಆರೋಗ್ಯ ರಕ್ಷಣಾ ಸೇವೆ ಮತ್ತು ವೈದ್ಯಕೀಯ ಸಾಧನಗಳು ಜಿ.ಎಸ್.ಟಿ. ಅಡಿ ಇದ್ದರೂ ತೆರಿಗೆ ಮುಕ್ತವಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಸಾಧನಗಳ ಮೇಲಿನ ತೆರಿಗೆ ಏರಿಕೆಯಾಗಿಲ್ಲ. ಕೆಲವೊಂದು ಆರೋಗ್ಯ ಸೇವೆಗಳು ದುಬಾರಿಯಾಗಲಿವೆ ಎಂದು ಹೇಳಲಾಗಿದೆ.

ಡಯಾಗ್ನಸ್ಟಿಕ್ ಕಿಟ್ ಮೇಲೆ ಶೇ. 28 ತೆರಿಗೆ ಇರುವುದರಿಂದ ರೋಗ ಪತ್ತೆಯೂ ದುಬಾರಿಯಾಗಲಿದೆ. ಡಯಾಲಿಸಿಸ್, ಪೇಸ್ ಮೇಕರ್, ಮೂಳೆ ಚಿಕಿತ್ಸೆ ಸಾಧನ, ಕ್ಯಾನ್ಸರ್ ಚಿಕಿತ್ಸಾ ಸಲಕರಣೆ ಮೇಲೆ ತೆರಿಗೆ ಹೆಚ್ಚಳವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...