alex Certify
ಕನ್ನಡ ದುನಿಯಾ       Mobile App
       

Kannada Duniya

ಜಿ.ಎಸ್.ಟಿ. ಎಫೆಕ್ಟ್ : ದುಬಾರಿಯಾಯ್ತು ಮದುವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಹಾಗೂ ನೋಟು ಅಮಾನ್ಯದಿಂದಾಗಿ ಮದುವೆ ವೆಚ್ಚ ತುಟ್ಟಿಯಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ಅಂದಾಜು ಮಾಡಿದೆ.

ಜಿ.ಎಸ್.ಟಿ ಕಾರಣದಿಂದಾಗಿ ಮದುವೆ ವೆಚ್ಚದಲ್ಲಿ ಶೇ. 10 -15 ರಷ್ಟು ಏರಿಕೆಯಾಗಲಿದೆ. ಬಟ್ಟೆ, ಚಿನ್ನಾಭರಣ ಖರೀದಿ, ಸಭಾಂಗಣದ ಬಾಡಿಗೆ, ಫೋಟೋ, ವಿಡಿಯೋ, ಊಟ, ತಿಂಡಿ ಮೊದಲಾದವುಗಳಿಗೆ ಹೆಚ್ಚು ತೆರಿಗೆಯನ್ನು ಪಾವತಿಸಬೇಕಿದೆ.

ಇದರೊಂದಿಗೆ ಆಹ್ವಾನ ಪತ್ರಿಕೆ, ಬ್ಯೂಟಿ ಪಾರ್ಲರ್, ರೂಂ ಬಾಡಿಗೆ ವೆಚ್ಚಗಳು ಏರಿಕೆಯಾಗಲಿವೆ. ಜಿ.ಎಸ್.ಟಿ. ಜಾರಿಯಾದ ಬಳಿಕ ವಿವಿಧ ಸೇವೆಗಳಿಗೆ ಶೇ. 18 ರಿಂದ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಸಹಜವಾಗಿಯೇ ಮದುವೆ ವೆಚ್ಚದಲ್ಲಿ ಏರಿಕೆಯಾಗಲಿದೆ.

ನವೆಂಬರ್ ನಿಂದ ಮದುವೆ ಸೀಸನ್ ಆರಂಭವಾಗಲಿದ್ದು, ಶೇ. 10 ರಿಂದ ಶೇ. 15 ರಷ್ಟು ಮದುವೆ ವೆಚ್ಚ ಏರಿಕೆಯಾಗಿರುವುದರಿಂದ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...