alex Certify
ಕನ್ನಡ ದುನಿಯಾ       Mobile App
       

Kannada Duniya

ಭಗವದ್ಗೀತೆ, ಕುರಾನ್, ಬೈಬಲ್ ಗೂ ನೀಡಬೇಕು ಜಿ.ಎಸ್.ಟಿ.?

ಆಧ್ಯಾತ್ಮಿಕ ಜ್ಞಾನ ತೆರಿಗೆ ಮುಕ್ತವಾಗಿರಬೇಕಾಗಿಲ್ಲ. ಧಾರ್ಮಿಕ ಗ್ರಂಥ, ಧಾರ್ಮಿಕ ಪತ್ರಿಕೆ, ಡಿವಿಡಿ, ಧರ್ಮಶಾಲೆ ಜಿ.ಎಸ್.ಟಿ. ಅಡಿಯಲ್ಲಿ ಬರಬೇಕೆಂದು ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಮಹತ್ವದ ಆದೇಶ ನೀಡಿದೆ. ಧರ್ಮಗ್ರಂಥ, ನಿಯತಕಾಲಿಕೆ, ಡಿವಿಡಿ ಮಾರಾಟ ಒಂದು ವ್ಯಾಪಾರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ ಕೋರ್ಟ್ ಮುಂದೆ ತೆರಿಗೆಗೆ ಸಂಬಂಧಿಸಿದಂತೆ ಶ್ರೀಮದ್ ರಾಮಚಂದ್ರ ಆಧ್ಯಾತ್ಮಿಕ ಸತ್ಸಂಗ ಸಾಧನಾ ಕೇಂದ್ರ ಅರ್ಜಿ ಸಲ್ಲಿಸಿತ್ತು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವುದು ನಮ್ಮ ಕೆಲಸ. ಹಾಗಾಗಿ ಸಂಸ್ಥೆಯನ್ನು ವ್ಯಾಪಾರದ ಅಡಿ ಸೇರಿಸಬಾರದೆಂದು ಮನವಿ ಸಲ್ಲಿಸಲಾಗಿತ್ತು.

ಜಿ.ಎಸ್.ಟಿ. ಆ್ಯಕ್ಟ್ 2(17)ರ ಪ್ರಕಾರ, ಸೇವೆ ಅಥವಾ ಶಿಕ್ಷಣ ನೀಡಲು ಹಣ ಪಡೆಯುವ ಯಾವುದೇ ಧಾರ್ಮಿಕ ಟ್ರಸ್ಟ್ ಜಿ.ಎಸ್.ಟಿ. ಅಡಿ ಬರಲಿದೆ. ಅಂಥ ಸಂಸ್ಥೆಗಳು ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿ ಮಾಡಬೇಕಾಗುತ್ತದೆ.

ಸಂಸ್ಥೆ ಧಾರ್ಮಿಕ ಶಿಕ್ಷಣಕ್ಕೆ ನೆರವಾಗಲು ಧಾರ್ಮಿಕ ಗ್ರಂಥ, ಪುಸ್ತಕ, ಡಿವಿಡಿ ಮಾರಾಟ ಮಾಡುವುದಾಗಿಯೂ ಹೇಳಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯನ್ನು ಜಿ.ಎಸ್.ಟಿ.ಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದಿದೆ. ಯಾವುದೇ ಧಾರ್ಮಿಕ ಸಂಸ್ಥೆಗಳು ಧರ್ಮಗ್ರಂಥ ಅಥವಾ ಪುಸ್ತಕಗಳ ಮಾರಾಟಕ್ಕೆ ಜಿ.ಎಸ್.ಟಿ. ಕಟ್ಟಬೇಕು ಎಂಬುದು ಈ ತೀರ್ಪಿನಿಂದ ಸ್ಪಷ್ಟವಾಗ್ತಿದೆ. ಸಾರ್ವಜನಿಕ ಗ್ರಂಥಾಲಯದಂತೆ ಭಕ್ತರಿಗೆ ಉಚಿತವಾಗಿ ಓದಲು ಅವಕಾಶ ನೀಡಿದ್ರೆ ಜಿ.ಎಸ್.ಟಿ. ಕಟ್ಟಬೇಕಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...