alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡುತ್ತಾ GST ಕೌನ್ಸಿಲ್…?

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ಸಂಬಂಧಿಸಿದಂತೆ ಮಹತ್ವ ನಿರ್ಧಾರ ತೆಗೆದುಕೊಳ್ಳಲು ಇಂದು ಜಿ ಎಸ್ ಟಿ ಕೌನ್ಸಿಲ್ ಸಭೆ ಸೇರುತ್ತಿದೆ. ಇದು ಜಿ ಎಸ್ ಟಿ ಕೌನ್ಸಿಲ್ ನ 25 ನೇ ಸಭೆಯಾಗಲಿದೆ. ಸಭೆಯಲ್ಲಿ ಕೆಲವೊಂದು ವಸ್ತುಗಳ ಜಿ ಎಸ್ ಟಿ ಏರಿಕೆಯಾದ್ರೆ ಮತ್ತೆ ಕೆಲವೊಂದು ವಸ್ತುಗಳ ಜಿ ಎಸ್ ಟಿ ಇಳಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಜಿ ಎಸ್ ಟಿ ಕೌನ್ಸಿಲ್, ಪೆಟ್ರೋಲ್ ಹಾಗೂ ಡೀಸೆಲ್ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳುವ ಸಂಭವವಿದೆ ಎಂದು ಮೂಲಗಳು ಹೇಳ್ತಿವೆ.

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲಿದೆ. ಇದ್ರಿಂದ ಬೇಸತ್ತ ಜನರು ಪೆಟ್ರೋಲಿಯಂ ಉತ್ಪನ್ನ ಕೂಡ ಜಿ ಎಸ್ ಟಿ ಅಡಿ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಣಕಾಸು ಹಾಗೂ ಪೆಟ್ರೋಲಿಯಂ ಸಚಿವರು ಕೂಡ ಇದನ್ನು ಬೆಂಬಲಿಸಿದ್ದಾರೆ. ಆದ್ರೆ ಅಂತಿಮ ತೀರ್ಪು ಜಿ ಎಸ್ ಟಿ ಕೌನ್ಸಿಲ್ ನದ್ದಾಗಿದೆ.

ಒಂದು ವೇಳೆ ಜಿ ಎಸ್ ಟಿ ಕೌನ್ಸಿಲ್ ಪೆಟ್ರೋಲ್ ಹಾಗೂ ಡೀಸೆಲನ್ನು ಜಿ ಎಸ್ ಟಿ ಅಡಿಗೆ ತಂದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಜಿ ಎಸ್ ಟಿ ಅಡಿ ಪೆಟ್ರೋಲ್, ಡೀಸೆಲ್ ತರುವ ಮುನ್ನ ಎಲ್ಲ ರಾಜ್ಯಗಳ ಒಪ್ಪಿಗೆ ಪಡೆಯುವುದು ಬಹಳ ಅವಶ್ಯವಾಗುತ್ತದೆ. ಎಲ್ಲ ರಾಜ್ಯಗಳು ತಮ್ಮ ಅನುಕೂಲ-ಅನಾನುಕೂಲ ನೋಡಿಕೊಂಡು ಪೆಟ್ರೋಲ್- ಡೀಸೆಲ್ ಬೆಲೆ ಏರಿಸುತ್ತವೆ. ಆದ್ರೆ ಜಿ ಎಸ್ ಡಿ ಅಡಿ ಇದು ಬಂದಲ್ಲಿ ಶೇಕಡಾ 28ರಷ್ಟು ಮಾತ್ರ ತೆರಿಗೆ ಬೀಳಲಿದೆ. ಇದು ರಾಜ್ಯಗಳ ನಷ್ಟಕ್ಕೆ ಕಾರಣವಾಗುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...