alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಯ್ತು ಆಗಸ್ಟ್ ತಿಂಗಳ ಜಿ.ಎಸ್.ಟಿ. ಸಂಗ್ರಹ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಜಿ.ಎಸ್.ಟಿ. ಸಂಗ್ರಹದಲ್ಲಿ ಸಣ್ಣ ಇಳಿಕೆ ಕಂಡಿದೆ.
ಜೂನ್ ನಲ್ಲಿ 95,610 ಕೋಟಿ ಸಂಗ್ರಹವಾಗಿತ್ತು, ಜುಲೈನಲ್ಲಿ 96,484 ಕೋಟಿ ರೂ. ಸಂಗ್ರಹವಾಗಿದ್ದರೆ ಆಗಸ್ಟ್ ನಲ್ಲಿ 93,960 ಕೋಟಿಯಷ್ಟೇ ಬಂದಿದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಜುಲೈನಿಂದ ಆಗಸ್ಟ್ 31ರ ವರೆಗೆ ಜಿ.ಎಸ್.ಟಿ.ಆರ್. 3ಬಿ 67 ಲಕ್ಷ ಸಲ್ಲಿಕೆಯಾಗಿದೆ. ಜುಲೈ ಅಂತ್ಯಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ. ಆದರೆ ಆದಾಯ ಸಂಗ್ರಹದಲ್ಲಿ ಮಾತ್ರ ಸಣ್ಣ ಇಳಿಕೆ ಕಂಡಿದೆ.

ಜುಲೈ 21ರಂದು ನಡೆದ ಜಿ.ಎಸ್.ಟಿ. ಸಭೆಯಲ್ಲಿ ವಿವಿಧ ತೆರಿಗೆಯನ್ನು ಕಡಿತ ಮಾಡುವ ತೀರ್ಮಾನ ಮಾಡಿತ್ತು. ಈ ಕಾರಣಕ್ಕೆ ಆದಾಯ ಇಳಿಕೆಯಾಗಿದೆ ಎಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ. ಜತೆಗೆ ತೆರಿಗೆ ರಿಯಾಯಿತಿ ನಿಜವಾದ ಪರಿಣಾಮ ಮುಂದಿನ ತಿಂಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...