alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್ ನಲ್ಲಿ ಇಳಿಕೆ ಕಂಡಿದೆ GST ಸಂಗ್ರಹ

ನವೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ನವೆಂಬರ್ 27ರವರೆಗೆ 83,346 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ತಿಂಗಳು ಒಟ್ಟಾರೆ 92,000 ಕೋಟಿ ರೂಪಾಯಿ ಜಿಎಸ್ಟಿ ಪಾವತಿಯಾಗಿತ್ತು.

ಕೆಲವು ವಸ್ತುಗಳ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಿರೋದೇ ಇದಕ್ಕೆ ಪ್ರಮುಖ ಕಾರಣ. ನವೆಂಬರ್ ನಲ್ಲಿ ಒಟ್ಟು 50.1 ಲಕ್ಷ ಜಿಎಸ್ಟಿ ಫೈಲಿಂಗ್ ಆಗಿದೆ. ಜುಲೈನಲ್ಲಿ 58.7 ಲಕ್ಷ, ಆಗಸ್ಟ್ ನಲ್ಲಿ 58.9 ಲಕ್ಷ, ಸೆಪ್ಟೆಂಬರ್ ನಲ್ಲಿ 57.3 ಲಕ್ಷ ಜಿಎಸ್ಟಿ ಫೈಲಿಂಗ್ ಆಗಿತ್ತು.

ಅಕ್ಟೋಬರ್ ನಲ್ಲಿ ಜಿಎಸ್ಟಿ ಮೂಲಕ ಸರ್ಕಾರ ಗಳಿಸಿದ ಆದಾಯ 95,131 ಕೋಟಿ ರೂಪಾಯಿ. ಸೆಪ್ಟೆಂಬರ್ ನಲ್ಲಿ 93,141 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಸುಮಾರು 200 ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಇಳಿಕೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...