alex Certify
ಕನ್ನಡ ದುನಿಯಾ       Mobile App
       

Kannada Duniya

ಪದವಿ ಪಡೆದು ಸಂಭ್ರಮಿಸಿದ ಮುಕೇಶ್ ಅಂಬಾನಿ ಪುತ್ರಿ

ಭಾರತದ ಕುಬೇರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಈಗ ಪದವೀಧರೆ. ಇತ್ತೀಚೆಗಷ್ಟೇ ಇಶಾ ಅಂಬಾನಿ ತಮ್ಮ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದ್ದಾರೆ. ಸ್ಟ್ಯಾನ್ ಫೋರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಇತ್ತೀಚೆಗಷ್ಟೆ ಇಶಾ ತಮ್ಮ ಎಂಬಿಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ಬ್ಯುಸಿನೆಸ್ ಸ್ಕೂಲ್ ನ 127 ನೇ ಪದವಿ ಪ್ರಧಾನ ಸಮಾರಂಭದಲ್ಲಿ ಇಶಾ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ನಟ ಸ್ಟೆರ್ಲಿಂಗ್ ಜೆ ಬ್ರೌನ್ ಕೂಡ ಹಾಜರಿದ್ದರು. ಇಶಾ ತಮ್ಮ ಕುಟುಂಬ ಸದಸ್ಯರೊಂದಿಗೆ ಹಾಜರಿದ್ದು, ತಮ್ಮ ಪದವಿಯನ್ನ ಪಡೆದುಕೊಂಡರು.

ಸುಮಾರು 2460 ಮಂದಿ ವಿದ್ಯಾರ್ಥಿಗಳು ಕೂಡ ಇದೇ ಸಂದರ್ಭದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಈ ಅಪರೂಪದ ಸಮಾರಂಭದಲ್ಲಿ ಇಶಾ ಅಂಬಾನಿಯ ಭಾವಿ ಪತಿ ಆನಂದ್ ಪರಿಮಳ್ ಕೂಡ ಭಾಗವಹಿಸಿದ್ದರು.

ಪದವಿ ಅಧ್ಯಯನದ ವೇಳೆ ಮನಃಶಾಸ್ತ್ರವನ್ನು ವ್ಯಾಸಂಗ ಮಾಡಿದ್ದ ಇಶಾ ಎಂಬಿಎ ಸಂದರ್ಭದಲ್ಲಿ ತಾಯಿಯ ಹಾಗೆ ಸ್ಟ್ಯಾನ್ ಫೋರ್ಡ್ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...