alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಪೆಟ್ರೋಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಯೋಜಿಸಿದ್ದು, ಈ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಪೆಟ್ರೋಲ್ ನಲ್ಲಿ ಶೇ. 15 ರಷ್ಟು ಮೆಥೆನಾಲ್ ಮಿಶ್ರಣ ಮಾಡಲು ನೀತಿಯನ್ನು ಪ್ರಕಟಿಸಿದ್ದು, ಇದರಿಂದಾಗಿ ಪೆಟ್ರೋಲ್ ಬೆಲೆ ಕಡಿಮೆಯಾಗಲಿದೆ.

ಶೇ. 15 ರಷ್ಟು ಮೆಥೆನಾಲ್ ಬಳಸುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಾಗಲಿದೆ. ಜೊತೆಗೆ ಪರಿಸರ ಮಾಲಿನ್ಯವನ್ನು ಕೂಡ ತಡೆಯಬಹುದಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಕಲ್ಲಿದ್ದಲಿನಿಂದ ತಯಾರಾಗುವ ಮೆಥೆನಾಲ್ ಗೆ ಲೀಟರ್ ಗೆ 22 ರೂ. ವೆಚ್ಚಾಗುತ್ತದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಪೆಟ್ರೋಲ್ ಗೆ ಮೆಥೆನಾಲ್ ಮಿಶ್ರಣ ಮಾಡುವ ನೀತಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪೆಟ್ರೋಲ್ ಬೆಲೆ 80 ರೂ. ಆಸುಪಾಸಿನಲ್ಲಿದ್ದು, ಮೆಥೆನಾಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...