alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿಗೂ ವಿಧಿಸಲಾಗುತ್ತೆ ಗರಿಷ್ಠ ಮಿತಿ…!

ಇನ್ಮೇಲೆ ವ್ಯಾಪಾರಿಗಳು 6 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಖರೀದಿ ಬಗ್ಗೆ ಹಣಕಾಸು ಗುಪ್ತಚರ ಘಟಕಕ್ಕೆ ಮಾಹಿತಿ ನೀಡಬೇಕು. ಮನಿ ಲಾಂಡರಿಂಗ್ ಗೆ ಬ್ರೇಕ್ ಹಾಕಲು ಈ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆಭರಣ ಮತ್ತು ಐಷಾರಾಮಿ ವಸ್ತುಗಳಿಗೆ ಈ ನಿಯಮ ಅನ್ವಯವಾಗಲಿದೆ.

ಎಲ್ಲಾ ರಾಷ್ಟ್ರಗಳಲ್ಲೂ ಖರೀದಿಗೂ ಗರಿಷ್ಠ ಮಿತಿ ವಿಧಿಸಲಾಗಿದೆ. ಅದೇ ರೀತಿ ಭಾರತದಲ್ಲೂ 6 ಲಕ್ಷ ಮಿತಿ ವಿಧಿಸಲು ಚಿಂತನೆ ನಡೆಯುತ್ತಿದೆ. ಗ್ರಾಹಕರ ಖರೀದಿ ವಿವರಗಳು ಸರ್ಕಾರಕ್ಕೆ ಲಭ್ಯವಾಗುವುದರಿಂದ ತೆರಿಗೆಗಳ್ಳರನ್ನು ಕೂಡ ಪತ್ತೆ ಮಾಡಬಹುದು. ಅಧಿಕ ಖರೀದಿ ಮಾಡಿರುವವರ ಆಸ್ತಿ ವಿವರ, ಆದಾಯದ ಮೂಲಗಳ ಬಗ್ಗೆಯೂ ಐಟಿ ಇಲಾಖೆಗೆ ಮಾಹಿತಿ ಸಿಗುತ್ತದೆ.

ಈಗಾಗ್ಲೇ ಹಣಕಾಸು ಅಕ್ರಮಗಳನ್ನು ತಡೆಯಲು ಇಂತಹ ಹಲವು ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ. 2 ಲಕ್ಷ ರೂಪಾಯಿಗೂ ಅಧಿಕ ನಗದು ವ್ಯವಹಾರ ಮಾಡದಂತೆ ನಿರ್ಬಂಧಿಸಿದೆ. 50,000 ರೂಪಾಯಿಗೂ ಅಧಿಕ ಮೊತ್ತದ ವಹಿವಾಟಿಗೆ ಪ್ಯಾನ್ ನಂಬರ್ ಸಲ್ಲಿಸುವುದನ್ನು ಕಡ್ಡಾಯ ಮಾಡಿದೆ.

ಕಳೆದ ಆಗಸ್ಟ್ ನಲ್ಲಿ ವಹಿವಾಟುಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ರತ್ನ ಮತ್ತು ಆಭರಣ ವ್ಯಾಪಾರಿಗಳಿಗೆ ಸರ್ಕಾರ ಸೂಚನೆ ನೀಡಿತ್ತು. ಆದ್ರೆ ವ್ಯಾಪಾರಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಅಕ್ಟೋಬರ್ ನಲ್ಲಿ ಅದನ್ನು ಹಿಂಪಡೆಯಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...