alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಬಾಂಡ್ ಗೆ ಹೆಚ್ಚಾಯ್ತು ಬೇಡಿಕೆ

gold nir

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಚಿನ್ನದ ಬಾಂಡ್ ಯೋಜನೆಯ 5 ನೇ ಕಂತಿಗೆ ಸುಮಾರು 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಚಿನ್ನದ ಬಾಂಡ್ ಯೋಜನೆಯ 5 ನೇ ಕಂತಿನಲ್ಲಿ ಸುಮಾರು 2.37 ಟನ್ ಗಳಷ್ಟು ಚಿನ್ನದ ಪ್ರಮಾಣ, 820 ಕೋಟಿ ರೂ. ಬಂಡವಾಳ ಸಂಗ್ರಹವಾಗುವ ನಿರೀಕ್ಷೆ ಇದೆ. 2 ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೂ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. 5 ನೇ ಕಂತಿನ ಬಾಂಡ್ ವಿತರಣೆಯಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ಗರಿಷ್ಠ 3,150 ರೂ.ಬೆಲೆ ಇದೆ.

ಆಗಸ್ಟ್ 22 ರಿಂದ 26 ರವರೆಗೆ ಶೇ.99.9 ರಷ್ಟು ಶುದ್ಧತೆ ಇರುವ ಚಿನ್ನಕ್ಕೆ ಈ ಬೆಲೆ ಇದೆ. 5 ನೇ ಕಂತಿನ ಯೋಜನೆ ಮುಗಿದ ನಂತರ, ದೀಪಾವಳಿ ಹಬ್ಬಕ್ಕೂ ಮೊದಲೇ, 6 ನೇ ಕಂತಿನ ಚಿನ್ನದ ಬಾಂಡ್ ಯೋಜನೆ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...