alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಮ್ ಆಪ್ ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ

bhim-appd-d

ಬೆಂಗಳೂರು: ನೋಟ್ ಬ್ಯಾನ್ ಮಾಡಿದ ಬಳಿಕ ಕೇಂದ್ರ ಸರ್ಕಾರ ಕ್ಯಾಶ್ ಲೆಸ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಿದೆ. ಇದರ ಭಾಗವಾಗಿ ಭೀಮ್ ಆಪ್ ಪರಿಚಯಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭೀಮ್ ಆಪ್ ಬಳಸಿ ವ್ಯವಹಾರ ನಡೆಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ನೀಡಲಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ(NPCI) ವತಿಯಿಂದ ಭೀಮ್ ಆಪ್ ಚಾಲನೆಗೊಂಡಿದ್ದು, ಏಕೀಕೃತ ಪಾವತಿ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಈ ಆಪ್ ಬಳಸಿ ವ್ಯವಹಾರ ನಡೆಸುವ ಗ್ರಾಹಕರಿಗೆ ಆಗಸ್ಟ್ 15 ರಿಂದ ವಿಶೇಷವಾದ ಕೊಡುಗೆಗಳು ಸಿಗಲಿವೆ ಎಂದು ಎನ್.ಪಿ.ಸಿ.ಐ. ವ್ಯವಸ್ಥಾಪಕ ನಿರ್ದೇಶಕ ಎ.ಪಿ. ಹೋಟಾ ತಿಳಿಸಿದ್ದಾರೆ.

ಇತರೆ ಪೇಮೆಂಟ್ ಆಪ್ ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದು, ಭೀಮ್ ಆಪ್ ಬಳಕೆದಾರರಿಗೂ ಕೊಡುಗೆ ನೀಡುವ ಬಗ್ಗೆ ಸರಕಾರಕ್ಕೆ ತಿಳಿಸಲಾಗಿತ್ತು. ಆಗಸ್ಟ್ 15 ರೊಳಗೆ ಅನುಮತಿ ಸಿಗಲಿದೆ.

ಸದ್ಯ 10 ರೂ. ನಿಂದ 25 ರೂ. ವರೆಗೆ ಕ್ಯಾಶ್ ಬ್ಯಾಕ್ ಕೊಡುಗೆ ನೀಡುತ್ತಿದ್ದು, ಈ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ಹೆಚ್ಚಿಸಲಾಗುವುದು. ಇನ್ನಷ್ಟು ಮಂದಿ ಭೀಮ್ ಆಪ್ ಬಳಸಲು ಉತ್ತೇಜನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಜೂನ್ ಅಂತ್ಯಕ್ಕೆ 1.6 ಕೋಟಿ ಮಂದಿ ಭೀಮ್ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದು, 40 ಲಕ್ಷ ಮಂದಿ ಸಕ್ರಿಯ ಬಳಕೆದಾರರಿದ್ದಾರೆ. ಶೀಘ್ರವೇ ಭೀಮ್ ನೂತನ ಆವೃತ್ತಿ 1.4 ಬಿಡುಗಡೆ ಮಾಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...