alex Certify
ಕನ್ನಡ ದುನಿಯಾ       Mobile App
       

Kannada Duniya

ನೋ ಕ್ಯಾಶ್ ನಿಂದ ಕಂಗಾಲಾದವರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ವಿವಿಧ ಕಾರಣಗಳಿಂದಾಗಿ ದೇಶಾದ್ಯಂತ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಗದು ಕೊರತೆ ಎದುರಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಎಲ್ಲೆಲ್ಲೂ ನಗದು ಕೊರತೆ ಎದುರಾದ ಕಾರಣ ಕೇಂದ್ರ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದ್ದು, 500 ರೂ. ನೋಟುಗಳ ಮುದ್ರಣವನ್ನು 5 ಪಟ್ಟು ಹೆಚ್ಚಳ ಮಾಡಲಾಗ್ತಿದೆ. ನೋಟುಗಳ ಕೊರತೆ ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ಪರ್ಯಾಯ ಕ್ರಮ ಕೈಗೊಂಡು ನೋಟುಗಳ ಮುದ್ರಣವನ್ನು ಹೆಚ್ಚಿಸಲು ಸೂಚಿಸಿದೆ.

ಪ್ರಸ್ತುತ ದಿನಕ್ಕೆ 500 ಕೋಟಿ ರೂ. ನಷ್ಟು 500 ಮುಖಬೆಲೆ ನೋಟುಗಳನ್ನು ಮುದ್ರಿಸುತ್ತಿದ್ದು, ಅದನ್ನು 5 ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ದಿನಕ್ಕೆ 2500 ಕೋಟಿ ರೂ. ನಷ್ಟು ನೋಟು ಮುದ್ರಣವಾಗಲಿದ್ದು, ತಿಂಗಳಿಗೆ ಸುಮಾರು 75,000 ಕೋಟಿ ರೂ. ಮೌಲ್ಯದ ನೋಟು ಚಲಾವಣೆಗೆ ಬರಲಿವೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಎಸ್.ಸಿ. ಗರ್ಗ್ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಈ ಕುರಿತು ಮಾಹಿತಿ ನೀಡಿ, ತಾತ್ಕಾಲಿಕವಾಗಿ ನಗದು ಕೊರತೆ ಕಂಡು ಬಂದಿದ್ದು, ಸಮಸ್ಯೆ ಬಗೆಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...